ಹದಿ ಹರೆಯದಲಿ ಬಂದು
ಕಚಗುಳಿಯಿಟ್ಟು ನಗಿಸಿ
ಮರೆಯಾದವಳ
ಅಗಲಿಕೆಯ
ನೋವು
ಮರೆಯಲಾಗದ ವ್ಯಥೆ ಇರಬಹುದೆಂದು
ಭಾವಿಸಿದ್ದ ಅಭಾಜನ ನಾನು ...
ಆದರೆ ಇಂದು ನಾನರಿತೆ ....
ವ್ಯಥೆ ...
ಅನುದಿನದ
ಅನುಗಾಲದ ವ್ಯಥೆಯೆಂದರೆ .. ..
ನವಮಾಸ ಹೊತ್ತು
ಕೈತುತ್ತು ಕೊಟ್ಟು
ಮುದ್ದಿಸಿ ಬೆಳೆಸಿದ
ಆ ಮಾತೆಯನು
ಅಭ್ರಂಕಷದಲಿ ಕೂಗಿ
ಕರೆದರೂ ಧ್ವನಿಕೊಡದೆ
ಮೌನದಲಿ ಮಲಗಿದ್ದ
ಆ ನಿಮಿಷದ ನೆನಪು ..
ಹೌದು
ಮರೆಯಲಾಗದ
ಅನುದಿನದ
ಅನುಗಾಲದ
ಅನುವರ್ತಿಸುವ
ವ್ಯಥೆ. ..
(ಅಭಾಜ=ಮೂರ್ಖ
ಅಭ್ರಂಕಷ = ಮುಗಿಲು ಮುಟ್ಟುವಂತೆ )
ಕಚಗುಳಿಯಿಟ್ಟು ನಗಿಸಿ
ಮರೆಯಾದವಳ
ಅಗಲಿಕೆಯ
ನೋವು
ಮರೆಯಲಾಗದ ವ್ಯಥೆ ಇರಬಹುದೆಂದು
ಭಾವಿಸಿದ್ದ ಅಭಾಜನ ನಾನು ...
ಆದರೆ ಇಂದು ನಾನರಿತೆ ....
ವ್ಯಥೆ ...
ಅನುದಿನದ
ಅನುಗಾಲದ ವ್ಯಥೆಯೆಂದರೆ .. ..
ನವಮಾಸ ಹೊತ್ತು
ಕೈತುತ್ತು ಕೊಟ್ಟು
ಮುದ್ದಿಸಿ ಬೆಳೆಸಿದ
ಆ ಮಾತೆಯನು
ಅಭ್ರಂಕಷದಲಿ ಕೂಗಿ
ಕರೆದರೂ ಧ್ವನಿಕೊಡದೆ
ಮೌನದಲಿ ಮಲಗಿದ್ದ
ಆ ನಿಮಿಷದ ನೆನಪು ..
ಹೌದು
ಮರೆಯಲಾಗದ
ಅನುದಿನದ
ಅನುಗಾಲದ
ಅನುವರ್ತಿಸುವ
ವ್ಯಥೆ. ..
(ಅಭಾಜ=ಮೂರ್ಖ
ಅಭ್ರಂಕಷ = ಮುಗಿಲು ಮುಟ್ಟುವಂತೆ )
.jpg)