ಒಂಭತ್ತು ತಿಂಗಳು ಒಡಲಲಿರಿಸಿ ಹೆತ್ತು ತುತ್ತು ಕೊಟ್ಟು ಮುದ್ದಿಸಿ ಬೆಳೆಸಿದ ನನ್ನವ್ವ ಇಹವ ತೊರೆದು ಆಯ್ತು ತಿಂಗಳು ಒಂಭತ್ತು ... ನನಗಿನ್ನೂ ಬಂದಿಲ್ಲ ... ಚಿತ್ತಸ್ವಾಸ್ಥ್ಯ ದಿನವೂ ಹೊತ್ತು ಅತ್ತು .. ಅತ್ತು ... ಕಳೆದರೂ ಬತ್ತಿಲ್ಲ ಕಣ್ಣೀರ ಕಡಲು ...!!! (ಚಿತ್ತಸ್ವಾಸ್ಥ್ಯ =ಮನಶ್ಯಾಂತಿ ಹೊತ್ತು ಎಂಬ ಪದಕ್ಕೆ - ಅತೀವ ದುಃಖದಿ ಎಂಬ ಅರ್ಥವೂ ಇದೆ )
ನೋವೊಂದು ಮನದೊಳಗೆ ಮನೆಮಾಡಿ ಕೊರೆಯುತಿದೆ ಹೃದಯವ ... ಸಂತಸದಿರಲು ಜೊತೆಗಿರ್ದರು ಮನುಜರು ನೂರು ನೂರು ... ನೋವಿನ ಒಂದಿಷ್ಟು ಪಾಲು ಕೇಳಿ ಪಡೆಯಲು ಸನಿಹ ಬರುವರೆಂದಿದ್ದೆ .. ಅನಿಸಿಕೆ ಸುಳ್ಳಾಯಿತು .. .................. ನೆರಳನೂ ನಾ ಕಾಣೆನಿಲ್ಲಿ ... !!!
ವಲಸೆ ಬಂದು ತಂಗಿರುವ ಪಕ್ಕದ್ಮನೆ ತಮಿಳಮ್ಮ ಆಡುವ ಭಾಷೆ ತಮಿಳು ... ತಮಿಳಮ್ಮನ ಮಕ್ಕಳು ಶಾಲೆಗೆ ಹೋಗಿ ಕಲಿವ ಭಾಷೆ ಕಸ್ತೂರಿ ಕನ್ನಡ .... ಅಕ್ಷರವೇ ಕಲಿಯದವ ಅವರಪ್ಪ ತಮಿಳಪ್ಪ ಕೂಲಿ ಕೆಲಸ ಮುಗಿಸಿ ಮುಸ್ಸಂಜೆಯಲಿ ವಾಲುತ ಬಂದು ಮಡದಿ-ಮಕ್ಕಳನು ಬಯ್ಯುಲು ಬಳಸುವ ಭಾಷೆ ಮಾತ್ರ ಇಂಗ್ಲೀಷು ....!!!
ಇನ್ನೆಂದೂ ನಿನ್ನ ನೋಡಲಾರೆ ಕಾಡಲಾರೆ ಮಾತನಾಡಲಾರೆ ಎಂದೆಲ್ಲಾ ನೆಲಮುಟ್ಟಿ ಶಪಥ ಮಾಡಿ ಶಾಶ್ವತ ವಿದಾಯ ಹೇಳಿ ಹೊರಟ ಕಲ್ಲು ಹೃದಯದ ಒಡತಿಯೇ ಮತ್ತಿನ್ಯಾಕೆ ಪ್ರತಿ ರಾತ್ರಿ ಕನಸಲಿ ಬಂದು ಕಾಡುತಿರುವಿ,,,,???
ಪ್ರಿಯೇ ಅಂದು ನಿನ್ನ ಹೃದಯದಲಿ ಕಂಗಳಲಿ ಹರಿಯುತಿದ್ದ ಆ ಪ್ರೀತಿಯ ಹೊಳೆಯ ನೆನಪಿನ ಅನುಭವವನ್ನು ಇಂದು ನಾ ಅಕ್ಷರಕೆ ಇಳಿಸಿ 'ಕವಿತೆ'ಯಾಗಿಸುವಾಗ ನಾ ಬಯಸುವೆ .. ಓದಲು ನೀನಿರಬೇಕಿತ್ತು ...
ಅಮ್ಮಾ .... ಇಂದೆನೆಗೆ ಸಾವಿನ ಭಯವಿಲ್ಲ ಅಸ್ವಸ್ತನಾದೊಡೆ ನೋವಿಲ್ಲ .. ಮನದೊಳಗೆ ಸಂತಸದ ಕೊರತೆಯಿದ್ದರೂ ಜೀವನದಲ್ಲಿ ಜಿಗುಪ್ಸೆಯಿಲ್ಲ .. ಇಹಲೋಕದಲಿ ಆಸೆ ತೀರುವ ವರೆಗೆ ಜೀವಿಸಿದೆ .. ಎಂದಲ್ಲ ಅಮ್ಮಾ ನಿನ್ನ ನೆನೆದೆನಗೆ ಉಮ್ಮಳ ನಾ ಶವವಾದೊಡೆ ನೀ ನಡೆದ ಮನೆಯತ್ತ ಹೊತ್ತಯ್ವರೆನ್ನ ... ಅತ್ತಕಡೆ ನಿನ್ನ ಬಂದು ಕಾಣಲು ಹುಚ್ಚು ಮನಸ್ಸಿನ 'ತವಕ
ಹೊಸ ಬಾಳಿನ ಹೊಸ ಪ್ರೀತಿಯ ಹೊಸ ಕನಸ ಕಾಣುತಿರಲು ಎಂದೋ ಸತ್ತ ನಿನ್ನ ನೆನಪುಗಳು ಮತ್ತೆ ಚಿಗುರ ತೊಡಗುವುದು ... ಮಗದೊಮ್ಮೆ ಹೃದಯದ ಕದಕದಪು ಹಿಂಡು ಹಿಚುಕಿ ಹಿಪ್ಪೆ ಮಾಡುವುದು ನನ್ನೀ ತನು ಮನವ. .. ಓ ನೆನಪೇ ನೀನೇಕೆ ಇನ್ನೂ ಕಾಡುತಿರುವೆ ...
ಚಾಚಾಜೀ ನೀನು ಕವಿ, ಬರಹಗಾರ , ಸ್ವಾತಂತ್ರ್ಯ ಪ್ರಧಾನಿ ... ಏನೆಲ್ಲಾ ಆಗಿರಬಹುದು ... ಆದರೆ ನಾ ಮೆಚ್ಚಿದ್ದು ನಿನ್ನ ಪ್ರಣಯ ಜೀವನ ಮುದಿಪ್ರಾಯದಲ್ಲೂ ... ನಿನ್ನಲ್ಲಿದ್ದ ರಸಿಕತೆ .. ನಿನ್ನ ಮೇರು ವ್ಯಕ್ತಿತ್ವದ ಒಳಗಡೆ ಅಡಗಿದ್ದ ಪ್ರಣಯ... ಎಡ್ವಿನಾ ಮೌಂಟ್ ಬೆಟನ್ ಳೊಂದಿಗೆ ಹಂಚಿ ಉಂಡು ಮುಗಿಸಿದ ಪ್ರೀತಿಯ ಭೋಜನ .. ನಲ್ಮೆ ಯ ಜೀವನ
ಮುಂದೊಂದು ದಿನ ಬರಬಹುದು... ಅಂತಿಮ ವಿದಾಯ ಹೇಳುವ ದಿನ ... ಮಲಗಿರಲು ಕನಸುಗಳ ಸುಳಿವಿರದು ಕೇಳಿಸಬಹುದೊಂದು ಅಶರೀರವಾಣಿ ... 'ನಿಷ್ಪ್ರಪಂಚವಾಗಿರುವಿ... ಸ್ತಬ್ದವಾಗಿದೆ ಈ ನಿನ್ನ ಹೃದಯ ಕ್ರಿಯೆ.. ತೆರೆ ಎಳೆದಿರುವೆ ನಿನ್ನ ಕನಸುಗಳಿಗೆ .. '
ಒಳಗಣ್ಣು ತೆರೆದಾಗ ... ಕಾಣಬಹುದು - ಕೇಳಬಹುದು ..... ಪುರುಷರ ನೀರವ ಮೌನ.. ಪಲುಂಬುವ ಸ್ತ್ರೀ ಶಬ್ಧಗಳು ...
ತನ್ನ ಪತಿ ಮಕ್ಕಳ ಒಳಿತಿಗಾಗಿ ದೀರ್ಘ ಆಯುಷ್ಯಕ್ಕಾಗಿ ದಿನವೂ ಭಗವಂತನಲ್ಲಿ ಅತ್ತು ಬೇಡುತಲಿದ್ದಳು ಹೆತ್ತಬ್ಬೆ .. ಆದರೆ ತಾನು ಅತ್ತ ತೆರಳಳು ಹೊರಟು ನಿಂತಾಗ ವಯಸ್ಸು ಕೇವಲ ನಲುವತ್ತು ...
ಮಹಡಿಯ ಮೇಲಿರುವ ಮನೆಯ ದಂಪತಿಗಳ ಜಗಳವ ದಿನವೂ ಕಂಡು - ಕೇಳಿ ನೆಲಮಹಡಿಯ ಅಕ್ಕ ಪಕ್ಕದ ಇಬ್ಬರು ವ್ಯಾಪಾರಿಗಳು ಜೊತೆ ಸೇರಿ ಫಲಕ ಬರೆಯಿಸಿದರು ... "ನೋವು ನಿವಾರಕ ಔಷಧಿಗಳಿಗೆ ಸಮೀಪಿಸಿ " ಒಬ್ಬನದು ಔಷಧಿ ಅಂಗಡಿ ಇನ್ನೊಬ್ಬನದು ಮಧ್ಯದಂಗಡಿ .
ಹೊಸ ಬಾಳಿನ ಹೊಸ ಪ್ರೀತಿಯ ಹೊಸ ಕನಸ ಕಾಣುತಿರಲು ಎಂದೋ ಸತ್ತ ನಿನ್ನ ನೆನಪುಗಳು ಮತ್ತೆ ಚಿಗುರ ತೊಡಗುವುದು ... ಮಗದೊಮ್ಮೆ ಹೃದಯದ ಕದಕದಪು ಹಿಂಡು ಹಿಚುಕಿ ಹಿಪ್ಪೆ ಮಾಡುವುದು ನನ್ನೀ ತನು ಮನವ. .. ಓ ನೆನಪೇ ನೀನೇಕೆ ಇನ್ನೂ ಕಾಡುತಿರುವೆ ...
ನಿವೃತ್ತಿ ವೇತನ ಪಡೆದು ಮರಳುತಿದ್ದ ಅಪ್ಪನಿಗಾಗಿ ದಾರಿ ಕಾಯುವ ಅಮ್ಮ-ಮಕ್ಕಳು ...... ಸಿಹಿ ತುಂಬಿದ ಪೊಟ್ಟಣವ ಅಮ್ಮನ ಕೈಗಿತ್ತು ಪೋಗುತಿದ್ದ ಅಪ್ಪನ ನಗುಮುಖ ... ಮಕ್ಕಳಿಗೆ ಸಮನಾಗಿ ಹಂಚುವ ಅಮ್ಮನ ಕರ್ತವ್ಯದ ಕರಗಳು ..
ಕವನ ಬರೆಯಲು ಬಲು ಸುಲಭ .. ಮೊದಲು ನೀ ನೆಡು ವಿಷಯವೆಂಬ ಗಿಡ ವಿರಹದ ಗೊಬ್ಬರವ ಹಾಕು ಉಪ್ಪಿನ ಕಣ್ಣೀರ ಥಳಿಸು .. ಗಿಡ ಬೆಳೆವುದ ನೋಡಿ ನಗು ... ನಂತರ ನೀ ಪೋಗು ಭ್ರಮೆಯೆಂಬ ಲೋಕಕೆ .. ಅದರಲರಳುವ ಹೂವ ನೆನೆಸು ಅರಳಿದ ಹೂವ ಮೂಸಿ ಪರಿಮಳವ , ಸುಗಂಧವ ಅನುಭವಿಸು .. ಕೊನೆಗೆ ಆ ಹೂವು ಬಾಡಿದಂತೆ ಗ್ರಹಿಸು ... ಇನ್ನು ನೀ ತೆಗೆ ಲೇಖನಿಯ ... ಗೀಚುತ ಹೋಗು ನಿನ್ನ ಗ್ರಹಿಕೆಯ ... ಕೊನೆಗೆ ಕಾಣುವುದು ನೀ ನೆಟ್ಟ ಗಿಡದಲಿ ಶ್ರೀಮಂತ ಫಸಲು ..