ನಿವೃತ್ತಿ ವೇತನ ಪಡೆದು
ಮರಳುತಿದ್ದ
ಅಪ್ಪನಿಗಾಗಿ
ದಾರಿ ಕಾಯುವ
ಅಮ್ಮ-ಮಕ್ಕಳು ......
ಸಿಹಿ ತುಂಬಿದ
ಪೊಟ್ಟಣವ
ಅಮ್ಮನ ಕೈಗಿತ್ತು
ಪೋಗುತಿದ್ದ
ಅಪ್ಪನ ನಗುಮುಖ ...
ಮಕ್ಕಳಿಗೆ ಸಮನಾಗಿ
ಹಂಚುವ ಅಮ್ಮನ
ಕರ್ತವ್ಯದ ಕರಗಳು ..
ಆ ದಿನಗಳನು
ನೆನಪಿಸಿತು
'ಈ ದಿನ'
ಕಯ್ಯಲಿರುವ
ಪೊಟ್ಟಣ ವ
ಯಾರ ಕೈಗಿಡಬೇಕೆಂಬ
ಅಪ್ಪನ ಮನಸಿನ
ಗೊಂದಲ ....
ನಗುವಿಂದ
ಸ್ವೀಕರಿಸಲು
ಅಮ್ಮನಿರಲಿಲ್ಲ ...
(ಇದು ಅನುಭವ)
ಮರಳುತಿದ್ದ
ಅಪ್ಪನಿಗಾಗಿ
ದಾರಿ ಕಾಯುವ
ಅಮ್ಮ-ಮಕ್ಕಳು ......
ಸಿಹಿ ತುಂಬಿದ
ಪೊಟ್ಟಣವ
ಅಮ್ಮನ ಕೈಗಿತ್ತು
ಪೋಗುತಿದ್ದ
ಅಪ್ಪನ ನಗುಮುಖ ...
ಮಕ್ಕಳಿಗೆ ಸಮನಾಗಿ
ಹಂಚುವ ಅಮ್ಮನ
ಕರ್ತವ್ಯದ ಕರಗಳು ..
ಆ ದಿನಗಳನು
ನೆನಪಿಸಿತು
'ಈ ದಿನ'
ಕಯ್ಯಲಿರುವ
ಪೊಟ್ಟಣ ವ
ಯಾರ ಕೈಗಿಡಬೇಕೆಂಬ
ಅಪ್ಪನ ಮನಸಿನ
ಗೊಂದಲ ....
ನಗುವಿಂದ
ಸ್ವೀಕರಿಸಲು
ಅಮ್ಮನಿರಲಿಲ್ಲ ...
(ಇದು ಅನುಭವ)
No comments:
Post a Comment