Wednesday, 20 November 2013

ನಿದ್ದೆಗಣ್ಣಲೂ ನಾ ಕಾಣುವೆ



ನಿದಿರಾ ದೇವಿಯು
ಕೈಬೀಸಿ ಕರೆಯುವ
ಈ ಹೊತ್ತಿನ
ನಿದ್ದೆಗಣ್ಣಲೂ
ನಾ ಕಾಣುವೆ 
ನನ್ನೆಡೆಗೆ ನೋಟವಿಟ್ಟು
ಬೇಟೆಯಾಡಲು
ಹಣಗುತಿರುವ
ನಿನ್ನ ನೆನಪುಗಳನ್ನು ...
ಗೌಳಿಯಂತೆ ...

(ಹಣಗು=ಮರೆಯಲ್ಲಿ ನಿಂತು ಹೊಂಚು ಹಾಕು
ಗೌಳಿ =ಹಲ್ಲಿ )

No comments: