ರವಿಯು ಬೆಳಕು ಚೆಲ್ಲುವ
ಮೊದಲೇ
ದೇವರನು ಧ್ಯಾನಿಸಲು
ಕೂಗಿ ಕರೆಯುವ
ಇಮಾಂ ಸಾಬರೂ
ಗುಡಿಯ ಗಂಟೆ
ಬಾರಿಸುವ
ಪೂಜಾರಿಯೂ
ಬೆಳಗೆದ್ದು ಮೀಯುವುದು
ಒಂದೇ ಕೊಳದಲ್ಲಿ ...
ಅವರಿಬ್ಬರಲ್ಲಿದ್ದ
ಸ್ನೇಹ-ಪ್ರೀತಿ -ಗೌರವ
ಅನ್ಯೋನ್ಯತೆ ..
ಮಸೀದಿ - ಗುಡಿಯ
ಕಡೆ ತಪ್ಪಿಯೂ
ಕಾಲಿಡದ
ಊರ ಯುವಕರ
ಹೃದಯದಲ್ಲೂ
ಇದ್ದಿದ್ದರೆ ...
ವಿಷ ಬೀಜಗಳು
ಮೊಳಕೆಯೊಡೆಯುತ್ತಿರಲಿಲ್ಲ
ಮೊದಲೇ
ದೇವರನು ಧ್ಯಾನಿಸಲು
ಕೂಗಿ ಕರೆಯುವ
ಇಮಾಂ ಸಾಬರೂ
ಗುಡಿಯ ಗಂಟೆ
ಬಾರಿಸುವ
ಪೂಜಾರಿಯೂ
ಬೆಳಗೆದ್ದು ಮೀಯುವುದು
ಒಂದೇ ಕೊಳದಲ್ಲಿ ...
ಅವರಿಬ್ಬರಲ್ಲಿದ್ದ
ಸ್ನೇಹ-ಪ್ರೀತಿ -ಗೌರವ
ಅನ್ಯೋನ್ಯತೆ ..
ಮಸೀದಿ - ಗುಡಿಯ
ಕಡೆ ತಪ್ಪಿಯೂ
ಕಾಲಿಡದ
ಊರ ಯುವಕರ
ಹೃದಯದಲ್ಲೂ
ಇದ್ದಿದ್ದರೆ ...
ವಿಷ ಬೀಜಗಳು
ಮೊಳಕೆಯೊಡೆಯುತ್ತಿರಲಿಲ್ಲ
No comments:
Post a Comment