Saturday, 21 December 2013

ನಾ ಓದಿದ ಶಾಲೆ .. (ಭಾಗ ೨ ) (ಅಂದಿನ ದಿನಗಳತ್ತ ನೆನಪುಗಳು ಹಿಂತಿರುಗಿದಾಗ )

ಶಾಲೆಯ 
ಮುಂಭಾಗ-ಹಿಂಭಾಗ ... 
ಅಲ್ಲ .. 
ಸಮಚತುರಸ್ರ 
ಹೇಳ ಹೊರಟರೆ 
ಅಸಂಗತ ಉಪಮೆಗಳು.. 
ಪದಗಳಿಗೆ ಬರಬಹುದು 
ಬರ .. 

ಬಲಗಡೆಯ ಹೈಸ್ಕೂಲಿನ 
ಮಾಮರ .. 
ಸೀಮೆ ದಾಟಿ 
ಕಲ್ಲು ಎಸೆದರೆ 
ಉದುರುತಿತ್ತು .. 
ಮಾವಿನ ಮಿಡಿ ... 
ಕೆ.ಟಿ ಮಾಸ್ತರ ಕೆಂಗಣ್ಣ 
ನೋಟಕೆ 
ಕಾಲ್ಕಿತ್ತು ಓಟ ... 

ಅತ್ತಕಡೆ ಸಾಲಾಗಿ ನಿಂತ 
ಜಾವ ಬೈಕುಗಳು .. 
ದೃಷ್ಟಿ ತಾಗದಂತೆ 
ಮೂಲೆಯಲಿ ನಿಲ್ಲಿಸಿದ 
ಪಂಡಿತರ 
ಹರ್ಕುಲಸ್ ಬೈಸಿಕಲ್ಲು ... 

ಎದುರಗಡೆಯೋ ... 
ಬಕ್ಕಂಬಯಲು ... 
ಬೇಲಿಯಿಲ್ಲದ ಮೈದಾನ.. 
ಭಟ್ಟರ ಅಂಗಡಿಯ 
ಸೈಕಲು ಬಾಡಿಗೆಗೆ ದಕ್ಕಿದರೆ 
ಒಂದು ರುಪಾಯಿಗೆ ಒಂದು ಗಂಟೆ 
ಭರ್ಜರಿ ತುಳಿತ .... 
ಕಲಿಯುವವನಿಗಿಂತ ಕಲಿಸುವವನಿಗೇ 
ಹೆಚ್ಚಿನ ಚಾನ್ಸು .... 

ಊಟವಿಲ್ಲದಿದ್ದರೂ 
ಪರವಾ ಇಲ್ಲ ... 
ಪಕ್ಕದ  ಅಂಗಡಿಯ 
ಪೆಪ್ಪರುಮೆಂಟು 
ಭಟ್ಟರ ಅಂಗಡಿಯ ಬಟಾಣಿ ಕಡಲೆ 
ಹಸಿದ ಹೊಟ್ಟೆಗೆ ಸಮಾಧಾನ 
ಹೇಳುತಿತ್ತು ... 

ಎಡಭಾಗದಲ್ಲಿ ರಾಜವೀಧಿ .. 
ದಿನಕೆ ಮೂರು ಹೊತ್ತಿನ 
ಧೂಮರ ಶಕಟ(ಬಸ್ಸು)ದ ಓಡಾಟ 
ದಿನಕ್ಕೆ ಮೂರು ಬಾರಿ 
ವೈದ್ಯ ಕೊಟ್ಟ ಚೀಟಿಯಂತೆ .. 
ಬೆಳಿಗ್ಗೆ - ಮದ್ಯಾಹ್ನ - ರಾತ್ರಿ .. 

ಗುರುವಾರ ಬಂದರೆ ಸಾಕು ... 
ಆರ್ಭಟಿಸುವ ಚಲನ ಚಿತ್ರದ  ಪ್ರಚಾರಕ 
ಕಾರಿನಲ್ಲಿ  ಆಗಮನ ... 
ನಾಳೆಯಿಂದ  ಪ್ರಾರಂಭ ... 
ನಿಮ್ಮ ನೆಚ್ಚಿನ ಹಿಲ್ ಸೈಡ್ ... 
ಚಿತ್ರ ಮಂದಿರದಲ್ಲಿ ... 
ಹಿಂದಿನಿಂದ ಓಡುವ 
ಹುಡುಗರು'... 
ಭಿತ್ತಿ ಪತ್ರ ಸಿಕ್ಕರೆ 
ಮರುದಿನ ಪಟ್ಯ ಪುಸ್ತಕದ 
ರಕ್ಷಾಕವಚ ... 

ಆಹಾ ... 
ಇನ್ನೂ ಎನೇನೋ ... 
ಬರೆದರೂ ಮುಗಿಯದ ನೆನಪುಗಳು .... 
ಹಿಂತಿರುಗಿ ನೋಡಿದರೆ 
ಗಹ ಗಹಿಸಿ ನಗುವ ನೆನಪುಗಳು ... 

(ಹಳೆಯ ನೆನಪುಗಳು ತಲೆ ಹಿಂಡಿದಾಗ ಬರೆದ ಹುಚ್ಚು ಸಾಲುಗಳು )

Friday, 20 December 2013

ನಾ ಓದಿದ ಶಾಲೆ ..

ನಾ 
ಓದಿದ ಶಾಲೆ .. 
ಇಂದು ಆ ದಾರಿಯಾಗಿ 
ಸಾಗುವಾಗ 
ನೆನಪುಗಳಿಗೆ 
ಬರುವುದು 
ಪುನರ್ಜನ್ಮ ...

ಮನೆಯಿಂದ
ನಾಲ್ಕೈದು ಮೈಲಿ
ದೂರದಲಿ ನಿಂತು
ಊರ ಜನಗಳನು ತನ್ನತ್ತ
ಕೈಬೀಸಿ ಕರೆಯುತಿರಲು
ಊರ ಜನರ ಬಾಯಲ್ಲಿ
ಬರಲಾಗದು
ಎನ್ನುವ ಧ್ವನಿಯಿರಲಿಲ್ಲ ...

ಪುಟ್ಟ ಕಾಲುಗಳ ಹೆಜ್ಜೆ
ಮೈಲುಗಳ
ಸವೆಸುತಿರಲು
ಮನದೊಳಗೆ
ಅ ಆ ಇ ಈ ಅಕ್ಷರಗಳು
ನಗುತಿದ್ದುವು ...

ಬೆನ್ನಲ್ಲಿ ತೂಗುತಿದ್ದ
ಪುಸ್ತಕದ ಗೂನು
ಮುಂಜಾನೆ -ಮುಸ್ಸಂಜೆಯ
ಧಾವಂತದ ಓಟಕ್ಕೆ
ಅಡಿಗಡಿಗೆ
ನಿಲ್ಲುವ ಸೂಚನೆ ಕೊಡುತಿದ್ದುವು ..

ಕನ್ನಡದ ಕೆಲವೊಂದು
ಪದಗಳು
ಕಬ್ಬಿಣದ ಕಡಲೆಯಂತೆ
ಕಂಡಾಗ
ಮಿಂಚಿ ಮಾಯವಾಗುವುದು
ಕನ್ನಡದ ಅಧ್ಯಾಪಕ
ಚೌಟ ಮಾಸ್ತರರ
ಬೆತ್ತದ ರುಚಿ ..

ತಲೆಗೆ ಹೊಕ್ಕದ
ಗಣಿತದ ಸಂಖ್ಯೆಗಳು ..
ಅಬ್ಬಾ...
ಶಂಕರ ಶೆಟ್ಟಿ ಮಾಸ್ತರರ
ಬೆತ್ತದ ಗೆರೆ ಇನ್ನೂ
ಮಾಸಿಲ್ಲ
ಬೆನ್ನ ಹಿಂದಿನ ಮಧ್ಯ ಭಾಗದಿಂದ ...

ಇಂದು ಅವರಿಲ್ಲ ...
ನಮಗೆ ಅಕ್ಷರ ದಾನ ಮಾಡಿ
ಭುವಿಗೆ ನಮಸ್ಕಾರ ಮಾಡಿ
ಹೋದರೂ
ಉಳಿದಿರುವರು
ನನ್ನಂತೆ ಚಿಂತಿಸುವ
ಲಕ್ಶೋಪ ಲಕ್ಷ ವಿಧ್ಯಾರ್ಥಿಗಳ
ಹೃದಯದಲಿ ...

(ಅಗಲಿದ ಇಬ್ಬರು ಹಿರಿಯ ಅಧ್ಯಾಪಕರನ್ನು ಪ್ರೀತಿಯಿಂದ ನೆನೆದು ಗೌರವಿಸಿದ್ದೇನೆ)
ಫೋಟೋ ಕೃಪೆ: J.P

ಮುಡಿಯೇರಿ ನಗುವಾಸೆ ...

ಅಂಗಳದಿ 
ಅರಳಿರುವ 
ಸುಮಗಳಿಗೂ 
ನನ್ನವಳ 
ಮುಡಿಯೇರಿ 
ನಗುವಾಸೆ ... !!!

ನೋವುಗಳ ಶಿಖರ ...

ನನ್ನ 
ಬರಹಗಳಲಿ 
ಕಾಣುವೆನು 
ನಿನ್ನ 
ನೆನಪುಗಳ 
ಪುನರ್ಜನ್ಮ . ..

ಬರೆವ ಪುಟಗಳು
ಏರಿದಂತೆ
ಮನದೊಳಗೆ
ಬೆಳೆವುದು
ನೋವುಗಳ
ಶಿಖರ ... !!!

ಜೀವನ ...

ಸುಖ 
ದುಃಖ 
ನೋವು 
ನಲಿವು ... 
ಇವುಗಳ ಅರ್ಥ 
ತಿಳಿದುದು
ನಿನ್ನ
ಪ್ರೀತಿಯಲ್ಲಿ .. ..
ಚುಟುಕಾಗಿ
ಹೇಳಿದರೆ
ಪ್ರೀತಿಯಲಿ
ನಾ
ಕಂಡದ್ದು
ಜೀವನ ... !!!

ಮಳೆಯ ಸುರಿಸಲು ಆದೇಶ ...


ಗೆಳತೀ
ನಾ ಕನಸ
ಕಾಣತೊಡಗಿದರೆ
ತಿಳಿಯಾಗಿರುವ
ಮನದಲೂ 
ಶುರುವಾಗುವುದು
ವ್ಯಥೆಯ ಮೋಡಗಳ
ಓಡಾಟ ...
ನೆನಪುಗಳು
ಕೊಡುವುದು
ಕಣ್ಣುಗಳೆರಡಕೂ
ಮಳೆಯ ಸುರಿಸಲು
ಆದೇಶ ... !!!

ವಿರಹದ ಬೀಜಗಳು ..

ಗೆಳತೀ ..... 
ನಿನ್ನ ನೆನೆದರೆ 
ನೆನೆಯುವುದೆನ್ನ 
ಮೃದು ಹೃದಯ ... 
ಮೊಳಕೆಯೊಡೆವುದು 
ವಿರಹದ 
ಬೀಜಗಳು .. !!!

ಸಂತಸವೇ ನಾನಿನ್ನ ಹೇಗೆ ಪ್ರೀತಿಸಲಿ ...??

ಸಂತಸವೇ 
ನಾನಿನ್ನ 
ಹೇಗೆ ಪ್ರೀತಿಸಲಿ ...??
ನೀನೊಬ್ಬ 
ಎಂದಾದರೊಮ್ಮೆ 
ಬರುವ
ಅಪರೂಪದ
ಅತಿಥಿ ...

ದುಃಖವೇ ..
ನಾ ನಿನ್ನ
ಪ್ರೀತಿಸುವೆ ...
ನೀನಾದರೆ
ಅನುದಿನವೂ
ನನ್ನ ನೆರಳಂತೆ
ಜೊತೆಯಿರುವ
ಬಾಲ್ಯ
ಸ್ನೇಹಿತ ... !

ಇಲ್ಲೊಂದು ಹೃದಯ ಕನಸ ಕಾಣುತಿರಲು..



ಇಲ್ಲೊಂದು
ಹೃದಯ
ಕನಸ ಕಾಣುತಿರಲು
ಅಲ್ಲೊಂದು
ವಿಧಿಯ ಸಬಳ 
ತನ್ನ ತುದಿಯನ್ನು
ಚೂಪು ಮಾಡುತ
ನೋವಿನ ಜೊತೆ
ಸಮಾಲೋಚನೆ
ನಡೆಸುತ್ತಿತ್ತು .. !!!

ತನ್ನ ಯಜಮಾನ ....

ತನ್ನ ಯಜಮಾನ 
ಮನೆಗೆ ಬಂದ 
ನೆಂಟರಿಷ್ಟರನು 
ನಗುತ 
ಬರಮಾಡಿ 
ಚಾವಡಿಯಲಿ ಕುಳ್ಳಿರಿಸಿ
ಹರಟುತಿರಲು ...

ಅನತಿ ದೂರದಲಿ
ಇದನು ಗಮನಿಸಿ-
ದಷ್ಟ ಪುಷ್ಟದಿ
ಬೆಳೆದು ನಿಂತ
ತನ್ನ
ಮುದ್ದು ಕಂದನ
ತಬ್ಬಿ ಹಿಡಿದು
ಅಳುತ್ತಿತ್ತು ...
ಧಣಿ ಮನೆಯ
ಮುದಿ
'ತಾಯಿ ಕುರಿ '.

ಕೊಟ್ಟ -ಪಡೆದ ಲೆಕ್ಕ ಚುಕುತಿಯಾಗಿದ್ದರೂ...

ಅಗಲಿದ 
ದಿನದಂದೇ 
ಕೊಟ್ಟ -ಪಡೆದ 
ಲೆಕ್ಕ 
ಚುಕುತಿಯಾಗಿದ್ದರೂ... 
ಅನುದಿನವು
ಕನಸಲಿ
ಬಂದು ಮತ್ತೂ
ಕೊಡುತಿರುವಳು
ಮುತ್ತು .....
ಮತ್ತೊಮ್ಮೆ
ಪ್ರೀತಿಯ
ಸಾಲಗಾರನನ್ನಾಗಿ
ಮಾಡಿ
ನಾ ಕೊರಗುವುದ ಕಂಡು
ಅಟ್ಟಾಳದಲಿ ನಿಂತು
ಅಟ್ಟಹಾಸದಿ ನಗಲು .. !!!

(ಅಟ್ಟಾಳ=ಉಪ್ಪರಿಗೆ )

ಆ ಸುಂದರ ದಿನಗಳಲಿ ...

ಅಂದು .. 
ಕಂಪ್ಯೂಟರ್ 
ಮೊಬೈಲ್ 
ಇಲ್ಲದ 
ಆ ಸುಂದರ 
ದಿನಗಳಲಿ ...
ಸಂಜೆಯ ಹೊತ್ತಲಿ
ಕಾಣಬಹುದಿತ್ತು ....

ಹೊರ ಜಗಲಿಯಲಿ ...
ಅಜ್ಜಿ .. ಮಗಳು .. ಮೊಮ್ಮಗಳು
ಒಬ್ಬರ ಹಿಂದೆ ಇನ್ನೊಬ್ಬರು
ಸಾಲಾಗಿ ಕುಳಿತು ...
ತಲೆಯಲೇನೋ ಹುಡುಕುತ್ತಾ ...
ತಲೆಮೇಲೆ ಕಾಲಿಟ್ಟು
ನಡೆಯುವ ಜೀವಿಯನು
ಜಡೆಯ ಎಡೆಯಿಂದ ..
ನಾಜೂಕಾಗಿ
ಬಿಡಿಸಿ
ಎಳೆದು .. ..
ಹೆಬ್ಬೆರಳೆರಡರ
ನಖಗಳ ನಡುವೆ ಬಂಧಿಸಿ ..
ಸುಯ್ ಎನುತ ...
ಕೊಂದು ಸಂತಸ ಪಡುವ
ಕದನದಲಿ ಮುಳುಗಿರುವ
ಹೆಣ್ಣು ಜೀವಿಗಳ
ದಂಡು .... 

ಸಿಹಿಯಾಗಿ ಕಾಣುವಾಸೆ ..

ಗೆಳತೀ 
ಅನುದಿನವು 
ಮನವ ತಣಿಸುವ 
ಭಾವನೆಗಳಿಗಿಂತಲೂ 
ಸಿಹಿಯಾಗಿ 
ಕಾಣುವಾಸೆ
ನಿನ್ನನು
ವಾಸ್ತವದಲಿ ..!!!

ಚಿಗುರಿದ ಮೀಸೆ- ಚಿಗುರಿದ ಪ್ರೇಮ

ಅಂದೊಮ್ಮೆ 
ಚಿಗುರಿದ ಮೀಸೆಗೆ 
ಚಿಗುರಿದ ಪ್ರೇಮಕೆ 
ಮನಸೋತು 
ನಗುತ ಬಂದ 
ಪ್ರೇಮಕೆ
ಗೊಬ್ಬರ ಹಾಕಿ
ಹಸನಾಗಿಸಲು
ಹರಿದ ಜೇಬಿಗೆ
ಶಕ್ತಿಯಿರಲಿಲ್ಲ ...
ಇಂದು
ಜೇಬಲಿ ಒಂದಿಷ್ಟು
ಗಾಂಧಿ ನೋಟುಗಳು
ನಗುತಿದ್ದರೂ
ಪ್ರೆಮವನರಸಿ
ಬರುವ
ಹೃದಯವನು
ಬಡಿದೋಡಿಸುತಿದೆ
ಮುದಿ
ಬಿಳಿ ಮೀಸೆ ...
ಜೊತೆಗೆ
ಮುಖದ
ನೆರಿಗೆ ... 

ಹದಿಹರೆಯ.....

ಹದಿಹರೆಯದ
ನೆತ್ತರು ಕುದಿವ
ಸಮಯದಲಿ 
ಗೆಳತಿಯ 
ತೆಕ್ಕೆಯಲಿರುವಾಗ 
ಅಪ್ಪ- ಅಮ್ಮನ
ಮಾತು - ಸಲಹೆ
ಸಪ್ಪೆ ..
ಅನಿಸಿರಬಹುದು ...

ತಾನಪ್ಪನಾದಾಗ
ತಾ ಮಾಡಿದ
ತಪ್ಪನರಿತು ನೊಂದರೂ
ತಿದ್ದಲಾಗದು ...
ಮನಸು ಹಗುರವಾಗದು ....

ತನಗರಿವಿಲ್ಲದಿದ್ದರೂ
ಗಮನಿಸುತಿರಬಹುದು ..
ಆಪ್ಪ-ಅಮ್ಮ
ದೂರದ
ಹಿತ್ತಿಲ ಗೋರಿಯಲೆಲ್ಲೋ
ತೆಪ್ಪಗೆ
ಮಲಗಿ.. !!!

ಹಸಿದ ಹೊಟ್ಟೆಗೆ ಸಾಂತ್ವನ

ಊರ ಗೌಡರ 
ಮನೆಯ 
ಅಂಗಳದಲ್ಲಿ 
ಜನಜಂಗುಳಿ .. 
ಮಕ್ಕಳ ಆಟ 
ಸದ್ದು-ಗದ್ದಲ
ಮದುವೆಯ
ಮುನ್ನುಡಿಯೋ
ಮರಣವೋ ...
ತಿಳಿಯದು
ಜನಂಜಂಗುಳಿಯ
ದೃಶ್ಯ ಗಳು
ತೋಟದ ಒಕ್ಕಲ
ಗುಡಿಸಲ ಮಕ್ಕಳ
ಹಸಿದ ಹೊಟ್ಟೆಗೆ
ಸಾಂತ್ವನ
ಹೇಳುತಿತ್ತು .. !!!

ವಿರಹಗಳ ಕವಿತೆ ... !!!

ಇರುಳನ್ನು 
ಪ್ರೀತಿಸಿ 
ಕತ್ತಲ ಕೋಣೆಯಲಿ 
ಲೇಖನಿಗೆ 
ಕಣ್ಣೀರ ತುಂಬಿಸಿ 
ಏನೇನೂ
ಗೀಚಿದ್ದೆ
ನಾ
ಹೃದಯದ ಹಾಳೆಯಲಿ....

ದೀಪದಂತೆ
ಬೆಳಗಿದ್ದು
ಮಾತ್ರ
ವಿರಹಗಳ ಕವಿತೆ ... !!!

ವರುಣನ ಕಣ್ಣೀರು ...

ಬೇಸಗೆಯ
ಆ 
ಮುಸ್ಸಂಜೆಯಲಿ 
ನೀ ನನ್ನ 
ಹೃದಯಕ್ಕೆ 
ಚುಚ್ಹಿ ಹೋದಾಗ
ಹೊರಗೆ
ಧಾರಾಕಾರ
ಸುರಿದ
ನೀರು
ಮಳೆಯಾಗಿರಲಿಲ್ಲ ...

ನನ್ನ ಹೃದಯವು
ಅನುಭವಿಸುವ
ನೋವ ಕಂಡು
ಮರುಗಿ
ವರುಣನು
ಸುರಿಸಿದ
ಕಣ್ಣೀರು ... !!!

***ಪ್ರೇಮ ಪತ್ರ ***


ಹಳೆಯ ಪುಸ್ತಕದ 
ನಡುವಿನಲಿ ಸಿಕ್ಕ ... 
ಹುಟ್ಟಿ 
ವರುಷದೊಳಗೆ ಸತ್ತ
ಪ್ರೇಮದ
ಪಳೆಯುಳಿಕೆ...

ಗೆದ್ದಲು ತಿಂದು
ಬಾಕಿ ಉಳಿಸಿದ
ಒಂದೆರಡು ಸಾಲುಗಳೆನ್ನೊಡನೆ
ಅಳುತ ಕೇಳಿತು ...
ಬರೆಯ ಬಹುದೇ
ಇನ್ನೊಮ್ಮೆ

ಕೊನೆಯಿರದ
ಪ್ರೇಮದ ಮಹಾಕಾವ್ಯ .??

ಪ್ರಣಯದ ಸ್ಮರಣೆ

ಪ್ರಣಯದ 
ಸ್ಮರಣೆ ಗಿಂತ 
ಮಿಗಿಲಾದ
ಸಿಹಿಯ
ನಾ 
ಸವಿದಿಲ್ಲ
ಜೊತೆಗೆ
ವಿರಹದ
ಕಹಿಗಿಂತ
ಮಿಗಿಲಾದ
ಕಹಿಯನೂ ....

ನಗುಮೊಗ..

ನಗುಮೊಗವು 
ಸಾರುವುದು 
ಸೌಹಾರ್ದತೆಯ 
ಸಂದೇಶ .. 
ನಗುಮೊಗವು 
ನಂದಿಸುವುದು
ದ್ವೇಷದ
ಜ್ವಾಲೆ...
ನಗು ಮಾಡುವ
ಮಹಾತ್ಕಾರ್ಯವ
ನಗು ನಗುತ
ನೆನೆಯೋಣ ..
ಗೌರವಿಸೋಣ ...
ನಗುವೇ
ನೀ ಅನುದಿನ
ನಮ್ಮ ಮೊಗದಲ್ಲಿ
ಜಿನುಗು ....

'ನನಗಿಷ್ಟ' ವೆಂಬ ಸವಿನುಡಿ..

'ನನಗಿಷ್ಟ' ವೆಂಬ 
ಸವಿನುಡಿ ನಿನ್ನ 
ಈ 
ಮೌನದಲಿ 
ಅಡಗಿದ್ದರೆ 
ಆ ಮೌನವೇ
ಸಾಕೆನಗೆ ..

ನಾ ಹೇಳಲೇ
ಮನದೊಂದಿಗೆ
'ನೀ
ಚಿಂತಿಸದೆ ಮೌನವಾಗಿರು '
ಎಂದು ..??

Thursday, 19 December 2013

ಮರೆತಂತೆ ನಟಿಸುವೆನು ...

ಮರೆತಂತೆ 
ನಟಿಸುವೆನು ... 
ಮರೆಯಲಾಗುತಿಲ್ಲ ... 

ಒಂಟಿತನದ 
ಸಂತಸದಲಿ
ಇರುಳು ಉರುಳುತಲಿರಲು
ಯಾವುದೋ ದನಿಯೊಂದು
ನಿದ್ದೆಗೆ ಗುದ್ದಿದಾಗ ..
ಎದ್ದೇಳುವೆನು ..

ಅಂಗಳದರಳಿದ
ಮಲ್ಲಿಗೆ ಹೂವು
ನಾಸಿಕದ
ಗೆಳೆತನ ಮಾಡಿ
ಮನದೊಳಗೆ
ಪುನರ್ಮಿಲನದ
ಕನಸ
ತುಂಬಿಸುವುದ
ಕಂಡರೂ
ಕಾಣದಂತೆ ನಟಿಸಿ
ಕಣ್ಮುಚ್ಚುವೆನು
ಸುಖದ ತಂಪಿನಲಿ ... !!!

ಅಟ್ಟಹಾಸದಿ ನಗಲು .. !!!

ಅಗಲಿದ 
ದಿನದಂದೇ 
ಕೊಟ್ಟ -ಪಡೆದ 
ಲೆಕ್ಕ 
ಚುಕುತಿಯಾಗಿದ್ದರೂ... 
ಅನುದಿನವು
ಕನಸಲಿ
ಬಂದು ಮತ್ತೂ
ಕೊಡುತಿರುವಳು
ಮುತ್ತು .....
ಮತ್ತೊಮ್ಮೆ
ಪ್ರೀತಿಯ
ಸಾಲಗಾರನನ್ನಾಗಿ
ಮಾಡಿ
ನಾ ಕೊರಗುವುದ ಕಂಡು
ಅಟ್ಟಾಳದಲಿ ನಿಂತು
ಅಟ್ಟಹಾಸದಿ ನಗಲು .. !!!

(ಅಟ್ಟಾಳ=ಉಪ್ಪರಿಗೆ )

ನವ ಮಾಸಗಳ ಹಿಂದೊಮ್ಮೆ ....

ನವ ಮಾಸಗಳ 
ಹಿಂದೊಮ್ಮೆ 
ತಣ್ಣನೆಯ ರಾತ್ರಿಯಲಿ 
ಸವಿ ಮಾತನಾಡಿ 
ಸವಿ ಕನಸ ಕಂಡು 
ಇರುಳ ಸುಖದಲಿ
ಬೆವತು ಮಿಂದೆದ್ದ
ದಿನದ ಫಲಿತಾಂಶ
ಪ್ರಕಟವಾಗುವ ದಿನವ
ಕಾಯುತಿರುವಳು
ನನ್ನವಳು

ಉಬ್ಬಿದ ಉದರದತ್ತ
ಕಯ್ಯಿಟ್ಟು ಎಣಿಸುತಿರುವಳು
ಕೈಬೆರಳಿನಲಿ
ತಿಂಗಳುಗಳನು
ದಿನಗಳನು ..

ನೋವಿನಲ್ಲೂ ಸುಖವ
ಕಾಣುತಿಹಳು
ಹೊಸ ವರುಷದಲಿ ಬರಲಿರುವ
ಹೊಸ ಮಗುವಿನ
ಹೊಸ ನಗುವಿನ
ಕನಸ ಕಾಣುತಿಹಳು .. 

ಆ ಸುಂದರ ದಿನಗಳಲಿ ...

ಅಂದು .. 
ಕಂಪ್ಯೂಟರ್ 
ಮೊಬೈಲ್ 
ಇಲ್ಲದ 
ಆ ಸುಂದರ 

ದಿನಗಳಲಿ ...
ಸಂಜೆಯ ಹೊತ್ತಲಿ
ಕಾಣಬಹುದಿತ್ತು ....

ಹೊರ ಜಗಲಿಯಲಿ ...
ಅಜ್ಜಿ .. ಮಗಳು .. ಮೊಮ್ಮಗಳು
ಒಬ್ಬರ ಹಿಂದೆ ಇನ್ನೊಬ್ಬರು
ಸಾಲಾಗಿ ಕುಳಿತು ...
ತಲೆಯಲೇನೋ ಹುಡುಕುತ್ತಾ ...
ತಲೆಮೇಲೆ ಕಾಲಿಟ್ಟು
ನಡೆಯುವ ಜೀವಿಯನು
ಜಡೆಯ ಎಡೆಯಿಂದ ..
ನಾಜೂಕಾಗಿ
ಬಿಡಿಸಿ
ಎಳೆದು .. ..
ಹೆಬ್ಬೆರಳೆರಡರ
ನಖಗಳ ನಡುವೆ ಬಂಧಿಸಿ ..
ಸುಯ್ ಎನುತ ...
ಕೊಂದು ಸಂತಸ ಪಡುವ
ಕದನದಲಿ ಮುಳುಗಿರುವ
ಹೆಣ್ಣು ಜೀವಿಗಳ
ದಂಡು .... 

ಗೆಳತೀ ...

ಗೆಳತೀ 
ಅನುದಿನವು 
ಮನವ ತಣಿಸುವ 
ಭಾವನೆಗಳಿಗಿಂತಲೂ 
ಸಿಹಿಯಾಗಿ 
ಕಾಣುವಾಸೆ
ನಿನ್ನನು
ವಾಸ್ತವದಲಿ ..!!!

ಅಂದೊಮ್ಮೆ ಚಿಗುರಿದ ಮೀಸೆಗೆ....

ಅಂದೊಮ್ಮೆ 
ಚಿಗುರಿದ ಮೀಸೆಗೆ 
ಚಿಗುರಿದ ಪ್ರೇಮಕೆ 
ಮನಸೋತು 
ನಗುತ ಬಂದ 
ಪ್ರೇಮಕೆ
ಗೊಬ್ಬರ ಹಾಕಿ
ಹಸನಾಗಿಸಲು
ಹರಿದ ಜೇಬಿಗೆ
ಶಕ್ತಿಯಿರಲಿಲ್ಲ ...
ಇಂದು
ಜೇಬಲಿ ಒಂದಿಷ್ಟು
ಗಾಂಧಿ ನೋಟುಗಳು
ನಗುತಿದ್ದರೂ
ಪ್ರೆಮವನರಸಿ
ಬರುವ
ಹೃದಯವನು
ಬಡಿದೋಡಿಸುತಿದೆ
ಮುದಿ
ಬಿಳಿ ಮೀಸೆ ...
ಜೊತೆಗೆ
ಮುಖದ
ನೆರಿಗೆ ... 

ಅಪ್ಪ- ಅಮ್ಮನ ಮಾತು - ಸಲಹೆ

ಹದಿಹರೆಯದ
ನೆತ್ತರು ಕುದಿವ
ಸಮಯದಲಿ 
ಗೆಳತಿಯ 
ತೆಕ್ಕೆಯಲಿರುವಾಗ 
ಅಪ್ಪ- ಅಮ್ಮನ
ಮಾತು - ಸಲಹೆ
ಸಪ್ಪೆ ..
ಅನಿಸಿರಬಹುದು ...

ತಾನಪ್ಪನಾದಾಗ
ತಾ ಮಾಡಿದ
ತಪ್ಪನರಿತು ನೊಂದರೂ
ತಿದ್ದಲಾಗದು ...
ಮನಸು ಹಗುರವಾಗದು ....

ತನಗರಿವಿಲ್ಲದಿದ್ದರೂ
ಗಮನಿಸುತಿರಬಹುದು ..
ಆಪ್ಪ-ಅಮ್ಮ
ದೂರದ
ಹಿತ್ತಿಲ ಗೋರಿಯಲೆಲ್ಲೋ
ತೆಪ್ಪಗೆ
ಮಲಗಿ.. !!!

ಹಸಿದ ಹೊಟ್ಟೆಗೆ ಸಾಂತ್ವನ

ಊರ ಗೌಡರ 
ಮನೆಯ 
ಅಂಗಳದಲ್ಲಿ 
ಜನಜಂಗುಳಿ .. 
ಮಕ್ಕಳ ಆಟ 
ಸದ್ದು-ಗದ್ದಲ
ಮದುವೆಯ
ಮುನ್ನುಡಿಯೋ
ಮರಣವೋ ...
ತಿಳಿಯದು
ಜನಂಜಂಗುಳಿಯ
ದೃಶ್ಯ ಗಳು
ತೋಟದ ಒಕ್ಕಲ
ಗುಡಿಸಲ ಮಕ್ಕಳ
ಹಸಿದ ಹೊಟ್ಟೆಗೆ
ಸಾಂತ್ವನ
ಹೇಳುತಿತ್ತು .. !!!

ಇರುಳನ್ನು ಪ್ರೀತಿಸಿ ..

ಇರುಳನ್ನು 
ಪ್ರೀತಿಸಿ 
ಕತ್ತಲ ಕೋಣೆಯಲಿ 
ಲೇಖನಿಗೆ 
ಕಣ್ಣೀರ ತುಂಬಿಸಿ 
ಏನೇನೂ
ಗೀಚಿದ್ದೆ
ನಾ
ಹೃದಯದ ಹಾಳೆಯಲಿ....

ದೀಪದಂತೆ
ಬೆಳಗಿದ್ದು
ಮಾತ್ರ
ವಿರಹಗಳ ಕವಿತೆ ... !!!

ತನ್ನೊಳಗಿನ ತಪ್ಪು ತನಗರಿವಾದಾಗ ...

ಅಂದು 
ದಂಡಿಸುವ 
ಕೋಲ ಹಿಡಿದ
ಗುರುಗಳ
ದಂಡನೆಗೆ ಹೆದರಿ
ಹಿಡಿ ಶಾಪ
ಹಾಕುತಿದ್ದವರು
ಇಂದು
ಗುರುಗಳನು
ಊರುಗೋಲಲಿ
ನಡೆವುದ ಕಂಡಾಗ
ಕೈ ಜೋಡಿಸಿ
ಗೌರವಿಸಿ
ತಲೆಬಾಗುವರು ...
ಪ್ರಾರ್ಥಿಸುವರು
ಅವರಿಗೆ
ಆಯುರಾರೋಗ್ಯ
ಕರುಣಿಸಲೆಂದು...

ತನ್ನ ಸಣ್ಣತನಕೆ ನಾಚಿ ...
ತನ್ನ ತಪ್ಪಿನರಿವಾಗಿ .... !!!

Thursday, 12 December 2013

ಬಾಲ್ಯದ ನವಿಲು ಗರಿ

ಅಂದು 
ಬಾಲ್ಯದಲಿ 
ನವಿಲು ಗರಿಯನು 
ಮುಚ್ಚಿಟ್ಟ 
ಪುಸ್ತಕದ 
ಪುಟವ
ಇಂದು
ತೆರೆದು ನೋಡಿಗಾಗ
ಕಂಡಿದ್ದು
ನವಿಲ ಗರಿಯ
ಜೊತೆ
ನೆನಪುಗಳ
'ಮರಿ'

ಕನಸುಗಳ ನೇಯುತಿರುವೆನು

ಕನಸುಗಳ 
ನೇಯುತಿರುವೆನು 
ಜೇಡನಂತೆ ... 
ಹಿರಿಯ ಪತಂಗ 
ಬಂದೆನ್ನಗೂಡನು 
ಕೆಡವಿದರೂ
ನಿರಾಸೆಯಿರದು ...
ನೇತಾಡುವೆ
ಒಂಟಿ
ದಾರದಲಿ ...
ಮರಳಿ ಕನಸ ಗೂಡ
ಕಟ್ಟ ತೊಡಗುವೆನು
ನವ
ನಿರೀಕ್ಷೆಯೊಂದಿಗೆ ... !!!

ಮುಗುಳ್ನಗೆಯ ಹನಿಮಳೆಗ

ನಿನ್ನೆ ಪನಿಸಿದ 
ಮುಗುಳ್ನಗೆಯ 
ಹನಿ ಮಳೆಗೆ 
ಮೆದುವಾಗಿದೆ 
ಮೃದು ಹೃದಯ ... 
ಗೆಳತೀ
ನೀ ಬಂದು
ಕನಸಿನ ಬೀಜವ
ಬಿತ್ತುವೆಯಾ ...???

ನೋವು ಮರೆಯಲಿಲ್ಲ



ಮನದ
ನೋವ ಮರೆಯಲು
ಕಾವ ತಣಿಸಲು
ಮಧ್ಯ
ಮದಿರೆಯರ 
ಮೊರೆ ಹೋಗಿದ್ದೆ ...
ನೋವು ಮರೆಯಲಿಲ್ಲ
ಕಾವು ತಣಿಯಲೂ
ಇಲ್ಲ ....

ವರುಷಗಳ ಹಿಂದೆ
ಓಡಿ ಹೋಗಿದ್ದ
ಪ್ರೀತಿಯ
ನೆನಪು ಮಾತ್ರ
ಮನವನೊಮ್ಮೆ
ತಣಿಸಿ
ಮಗದೊಮ್ಮೆ
ಹೃದಯವ ಚಿವುಟಿ
ಓಡಿ ಹೋಗುವ
ಕಾಯಕವ
ಮುಂದುವರಿಸುತ್ತಲೇ
ಇತ್ತು ... !!!

ಮಮತೆಯ ತೋಟ



ಮಮತೆಯ
ತೋಟದಲರಳಿ
ಕೊನೆಗೆ
ಬಾಡಿ ಭುವಿಯ
ಸೇರಿದರೂ 
ಅರಳಿದ
ದಿನಗಳಲಿ
ನೀಡಿದ ಅದೇ
ಮಾನವತೆಯ
ಮಾಧುರ್ಯವ
ಮನದೊಳಗೆ
ಇಂದಿಗೂ
ನೆನಪಿಸಿ
ಸುಗಂಧವ
ಪಸರಿಸುತಿರುವ
ನಗು ಮಲ್ಲಿಗೆ
ನನ್ನಮ್ಮ ... !!!

ಮಮತೆಯ ಮಹಾ ಗ್ರಂಥ ..



ಅಮ್ಮಾ .....
ನಿನ್ನ
ನೆನೆಪಲಿ
ಸುರಿವ
ಒಂದೊಂದು 
ಹನಿ
ಕಣ್ಣೀರೂ
ಬರೆವುದು
ನೂರೊಂದು ....
.................
ಮಮತೆಯ
ಮಹಾ ಗ್ರಂಥ .. !!!

ಅಮ್ಮಾ.....

ಅಮ್ಮಾ..... 
ಬರಡು 
ಭೂಮಿಯಲಿರುವ 
ನಿನ್ನ ಗೋರಿಯ 
ಮೇಲೆ 
ಕಾಣುವುದು
ಹಸಿರ ಕಂಪು ...

ಅನುದಿನವೂ
ಹಸಿರ
ಉಸಿರಿಗೆ
ಕಣ್ಣೀರ
ತಳಿಸಿದೊಡೆ
ಹೃದಯವೂ
ಪಡೆವುದು
ಒಂದಿಷ್ಟು
ತಂಪು ... !!!

ಕೋರಿಕೆ





ಗೆಳತೀ
ನೀ
ನನ್ನ 
ಗೋರಿ ಮೇಲೆ
ಸುರಿವ
ಸುಮಗಳಿಗೆ
ನಿನ್ನ
ಕಣ್ಣೀರು
ತಾಕದಿರಲಿ .....

Sunday, 8 December 2013

ವಂಚಿಸುವ ಕನಸುಗಳು



ಹತ್ತಿಪ್ಪತ್ತು 
ವರುಷಗಳಿಂದ 
ಕನಸಲಿ ಮಾತ್ರ 
ಕಾಣುತಿದ್ದ
ದುಂಡು ಮುಖ 
ಜಿಂಕೆ ಕಣ್ಣು .. 
ಕಪ್ಪುಗೂದಲ 
ಗೆಳತಿಯನು 
ನಾನಿಂದು  
ಆ ಜಾತ್ರೆಯ 
ಜನ ಜಂಗುಳಿಯ ನಡುವೆ 
ಗುರುತಿಸಿದೆ ... 

ಸುಕ್ಕು ಗಟ್ಟಿದ ಮುಖ 
ಗುಳಿಬಿದ್ದ ಕಣ್ಣು ... 
ಬೆಳ್ಳಿಗೂದಲು  ... !!!

ಇಂದು 
ನನಗರಿವಾಯ್ತು ... 
ವರುಷಗಳಿಂದ 
ಅವಳ 
ಕನಸುಗಳೂ ನನ್ನನ್ನು 
ವಂಚಿಸುತ್ತಲೇ 
ಇದೆಯೆಂದು....!!! 

ಭರವಸೆ...

ನೋವುಗಳ 
ನದಿ ಮಧ್ಯದಲಿ 
ನಿಂತಿರುವ 
ದೋಣಿಯಲಿ 
ಭರವಸೆಯ 
ಪಣತೊಟ್ಟು
ಹೆಣಗಾಡುತಲಿರಲು
ಸಾಂತ್ವನದ
ತುಡುವು
ದಡದಲ್ಲೀ
ನಿಂತು
ನಗುತಿದೆ ... !!!

ಜೀವ ವೃಕ್ಷ

ಜೀವದ 
ವೃಕ್ಷಕ್ಕೆ 
ವಯಸು ಏರುತಿದೆ .. 
ನೆನಪಿನ ಎಲೆಗಳು 
ಉದುರುತಿವೆ ... 
ಚಿಗುರುವ
ಪ್ರತೀಕ್ಷೆಯಿಲ್ಲ ...
ಹಣ್ಣಿಲ್ಲ - ಕಾಯಿಲ್ಲ ..
ಹಣ್ಣು -ಕಾಯ ತಿನ್ನಲು
ಬರುವ
ಹಕ್ಕಿಗಳಿಲ್ಲ ...
ಆದರೂ
ಬದುಕಿರುವೆ ...
ಔಶಧಿಯೆಂಬ
ಬೇರಿನ
ಹಿಡಿತದಿಂದ ...

Friday, 6 December 2013

ಒಂಟಿ ಮನ

ಕನಸುಗಳು 
ಸತ್ತಿರಲು 
ಮನಸಾಯ್ತು 
ಎಲೆಗಳುದುರಿದ 
ಒಂಟಿ ಮರ... 

ಹಸಿರೆಂಬ 
ಉಸಿರಿಲ್ಲದ 
ಮರದಲಿ 
ಹಕ್ಕಿಗಳ 
ಚಿಲಿಪಿಲಿ 
ಕರಲವವಿಲ್ಲ.. .  

ಒಂಟಿ ಮನ 
ಒಂಟಿ ಮರ 
ತುಂಟತನದ 
ನೆನಪುಗಳ 
ಮೆಲುಕು ಹಾಕುತ 
ಕಣ್ಣೀರಿಡುತಿದೆ .. 


ಹಲವು ಹೂಗಳು

ಹಲವು 
ಹೂಗಳು- 
ಹೂವ ಮಾಲೆಗಳು 
ಅವಳನೂ 
ನನ್ನನೂ 
ನಾವಿರುವ
ಜಾಗವನೂ
ಅಲಂಕರಿಸಿವೆ ...

ಅವಳು
ಮೊದಲ ರಾತ್ರಿಯ
ಅಲಂಕರಿಸಿದ
ಮಂಚ ದಲ್ಲಿ ...

ನಾನು ...
ಉಸಿರಾಡದೆ ಮಲಗಿರುವೆ
ಅಲಂಕರಿಸಿದ
ಚಕ್ಕಡಿಯಲ್ಲಿ ...

(ಚಕ್ಕಡಿ = ಎತ್ತಿನ ಗಾಡಿ )

ಕಪ್ಪು ಬಿಳುಪು ಚಿತ್ರದ ಶೋಕ ಗೀತೆ



ನೀ
ಕೊಟ್ಟ
ನೋವನು
ನೆನಪಿಸಲೆಂಬಂತೆ
ಅನುದಿನವೂ 
ಬರುತಿದೆ-
ಪ್ರಸಾರವಾಗುತಿದೆ
ನಿನ್ನ
ಹಾವಭಾವಗಳು ...
ಕಪ್ಪು ಬಿಳುಪು
ಚಿತ್ರದ
ಶೋಕ
ಗೀತೆಯ
ಸಾಲುಗಳೊಂದಿಗೆ
'ದೃಶ್ಯ ಮಾಧ್ಯಮ'ದಲ್ಲಿ ...

ಪ್ರೇಮವೆಂದರೆ 'ಬೆಂಕಿ ' ....

ಹೌದು 
ಪ್ರೇಮವೆಂದರೆ 'ಬೆಂಕಿ '
ಕೆಲವೊಮ್ಮೆ 
ಮನದೊಳಗೆ 
ಉರಿಯುತ 
ದೇಹವನೇ
ಸುಟ್ಟರೆ ...
ಕೆಲವೊಮ್ಮೆ
ಸೋತು
ಮಲಗಿದ್ದ
ಮನಕೆ ಬಿಸಿ ಕೊಟ್ಟು
ಉತ್ಸಾಹದ
ಚಿಲುಮೆ
ಮಾಡಿ ಬಿಡುತ್ತದೆ

ಕಲ್ಲು ವಿಗ್ರಹ ....



ಭಕ್ತನ
ನೋವನು ಕಿವಿಗೊಟ್ಟು
ಆಲಿಸಿ - ನೊಂದು
ಕೊನೆಗೆ
ಆ ಕಲ್ಲು ವಿಗ್ರಹ 
ಇಂತೆಂದಿತು ..

'ಬಿಸಿಲಲಿ ಒಣಗುತಿದ್ದ
ನಾನು
ಈ ರೂಪ
ಪಡೆದು ಸುಂದರನಾಗಲು
ನಗುತ ಹಾಯಾಗಿರಲು
ನಾನೆಷ್ಟೋ
ಉಳಿಯ ಪೆಟ್ಟನು
ತಿಂದಿರುವೆ ... '

ಆ ಮಾತಿಗೆ
ಭಕ್ತನಲಿ
ಉತ್ತರವಿರಲಿಲ್ಲ .. !!!

ಕಾಡುವ ಕನಸು



ಕಾಡುವ
ಕನಸುಗಳಿಗೂ
ಕನಸುಗಳಿರಬಹುದೇ(ನೋ- no ...?) .!!!

ಹೃದಯದಲಿ ದೀಪ ಹಚ್ಚಿ...

ತನ್ನ ನೋವಿಗೆ 
ತನ್ನನೇ 
ಹೊಣೆ ಮಾಡಿ . 
ತನ್ನವರ 
ಮೇಲಿನ 
ಪ್ರೀತಿಯ
ಕಡೆಗಣಿಸದೆ
ತನ್ನ ತಪ್ಪನು
ತಾನೇ
ತಿದ್ದಿದೊಡೆ
ತನ್ನ ಹೃದಯದಲಿ
ತಾನೇ
ದೀಪ ಹಚ್ಚಿ...
ತಾನೇ
ಮನವ
ಬೆಳಗಿದಂತಾಗುವುದು ...

ನಿರಾಸೆಯೆಂದರೆ ..

ಚಿರಗಾಲ 
ಮರೆಯದ 
ಮರೆಯಲಾಗದ 
ನಿರಾಸೆಯೆಂದರೆ ... 
ಹಸೆಮಣೆಯೇರಿ 
ವರುಷಗಳು
ಸಂದು ..
ಕೊನೆಗೆ
ಕಣ್ಣಿಗೆ ಕಾಣುವ ವೈದ್ಯರ
ಕಣ್ಣಿಗೆ ಕಾಣದ ದೇವರ
ಮೊರೆಹೊಕ್ಕು
ದಕ್ಕಿದ ಭಾಗ್ಯವ ...
ಉಬ್ಬಿದ ಉದರವ
ಮುಟ್ಟಿ
ನಗುತ ಕನಸ ಕಾಣುತ
ಕಾಲ ಕಳೆಯುತಿರಲು ...
ಪುಟ್ಟ ಕಂದನ
ಪುಟ್ಟ ಕಾಲು
ಕಾಣುವ ಮೊದಲೇ
ಭುವಿಯ
ಕಾಣಲು
ಕಣ್ಣು ತೆರೆಯದೆ
ಹೊರಟ
ಕಂದಮ್ಮನಲಿ
ಇಟ್ಟಿದ್ದ
ಭರವಸೆಯ
ಪತನ ...