Thursday, 19 December 2013

ನವ ಮಾಸಗಳ ಹಿಂದೊಮ್ಮೆ ....

ನವ ಮಾಸಗಳ 
ಹಿಂದೊಮ್ಮೆ 
ತಣ್ಣನೆಯ ರಾತ್ರಿಯಲಿ 
ಸವಿ ಮಾತನಾಡಿ 
ಸವಿ ಕನಸ ಕಂಡು 
ಇರುಳ ಸುಖದಲಿ
ಬೆವತು ಮಿಂದೆದ್ದ
ದಿನದ ಫಲಿತಾಂಶ
ಪ್ರಕಟವಾಗುವ ದಿನವ
ಕಾಯುತಿರುವಳು
ನನ್ನವಳು

ಉಬ್ಬಿದ ಉದರದತ್ತ
ಕಯ್ಯಿಟ್ಟು ಎಣಿಸುತಿರುವಳು
ಕೈಬೆರಳಿನಲಿ
ತಿಂಗಳುಗಳನು
ದಿನಗಳನು ..

ನೋವಿನಲ್ಲೂ ಸುಖವ
ಕಾಣುತಿಹಳು
ಹೊಸ ವರುಷದಲಿ ಬರಲಿರುವ
ಹೊಸ ಮಗುವಿನ
ಹೊಸ ನಗುವಿನ
ಕನಸ ಕಾಣುತಿಹಳು .. 

No comments: