ಓದಿದ ಶಾಲೆ ..
ಇಂದು ಆ ದಾರಿಯಾಗಿ
ಸಾಗುವಾಗ
ನೆನಪುಗಳಿಗೆ
ಬರುವುದು
ಪುನರ್ಜನ್ಮ ...
ಮನೆಯಿಂದ
ನಾಲ್ಕೈದು ಮೈಲಿ
ದೂರದಲಿ ನಿಂತು
ಊರ ಜನಗಳನು ತನ್ನತ್ತ
ಕೈಬೀಸಿ ಕರೆಯುತಿರಲು
ಊರ ಜನರ ಬಾಯಲ್ಲಿ
ಬರಲಾಗದು
ಎನ್ನುವ ಧ್ವನಿಯಿರಲಿಲ್ಲ ...
ಪುಟ್ಟ ಕಾಲುಗಳ ಹೆಜ್ಜೆ
ಮೈಲುಗಳ
ಸವೆಸುತಿರಲು
ಮನದೊಳಗೆ
ಅ ಆ ಇ ಈ ಅಕ್ಷರಗಳು
ನಗುತಿದ್ದುವು ...
ಬೆನ್ನಲ್ಲಿ ತೂಗುತಿದ್ದ
ಪುಸ್ತಕದ ಗೂನು
ಮುಂಜಾನೆ -ಮುಸ್ಸಂಜೆಯ
ಧಾವಂತದ ಓಟಕ್ಕೆ
ಅಡಿಗಡಿಗೆ
ನಿಲ್ಲುವ ಸೂಚನೆ ಕೊಡುತಿದ್ದುವು ..
ಕನ್ನಡದ ಕೆಲವೊಂದು
ಪದಗಳು
ಕಬ್ಬಿಣದ ಕಡಲೆಯಂತೆ
ಕಂಡಾಗ
ಮಿಂಚಿ ಮಾಯವಾಗುವುದು
ಕನ್ನಡದ ಅಧ್ಯಾಪಕ
ಚೌಟ ಮಾಸ್ತರರ
ಬೆತ್ತದ ರುಚಿ ..
ತಲೆಗೆ ಹೊಕ್ಕದ
ಗಣಿತದ ಸಂಖ್ಯೆಗಳು ..
ಅಬ್ಬಾ...
ಶಂಕರ ಶೆಟ್ಟಿ ಮಾಸ್ತರರ
ಬೆತ್ತದ ಗೆರೆ ಇನ್ನೂ
ಮಾಸಿಲ್ಲ
ಬೆನ್ನ ಹಿಂದಿನ ಮಧ್ಯ ಭಾಗದಿಂದ ...
ಇಂದು ಅವರಿಲ್ಲ ...
ನಮಗೆ ಅಕ್ಷರ ದಾನ ಮಾಡಿ
ಭುವಿಗೆ ನಮಸ್ಕಾರ ಮಾಡಿ
ಹೋದರೂ
ಉಳಿದಿರುವರು
ನನ್ನಂತೆ ಚಿಂತಿಸುವ
ಲಕ್ಶೋಪ ಲಕ್ಷ ವಿಧ್ಯಾರ್ಥಿಗಳ
ಹೃದಯದಲಿ ...
(ಅಗಲಿದ ಇಬ್ಬರು ಹಿರಿಯ ಅಧ್ಯಾಪಕರನ್ನು ಪ್ರೀತಿಯಿಂದ ನೆನೆದು ಗೌರವಿಸಿದ್ದೇನೆ)
ಫೋಟೋ ಕೃಪೆ: J.P

No comments:
Post a Comment