Monday, 3 February 2014

ಬೆತ್ತದೇಟಿನ ಭಯ ... !!!



ಅಜ್ಜ ಕುಳಿತಿರುತಿದ್ದ 
ಕುರ್ಚಿಯಲಿ 
ಕುಳಿತಿರಲು - 
ಬರಲಾರನೆಂದು 
ತಿಳಿದಿದ್ದರೂ 
ಬಂದರೆ
ಬೆತ್ತದೇಟಿನ
ರುಚಿಯ
ಅನುಭವಿಸಬೇಕೆನುವ
ಹುಚ್ಚು ಭಯ ... !!!

ಒಲವ ಭಾವನೆಗಳು ...

ಒಲವ ಭಾವನೆಗಳು 
ಹೃದಯದೊಳಹೊಕ್ಕುತಿರಲು 
ಮನಸಾರೆ ಹಿಗ್ಗಿ
ಸಿಹಿ ಕನಸ 
ಕಾಣುತಲಿದ್ದೆ ... 

ಹೊಕ್ಕ ಭಾವನೆಗಳು
ಹೃದಯದ ಹೊಲದಲ್ಲಿ
ಚಿಗುರಿದರೂ
ಫಸಲು ನೀಡಲಿಲ್ಲ ....

ಚಿಗುರಿದರೆಘಳಿಗೆಯಲೇ
ಬೀಸಿದ ಕುಳಿರ್ಗಾಳಿಗೆ
ಕುಮರಿಯಲೇ
ಕರಗಿ ಹೋಗಿತ್ತು ...

ಮುಗ್ದ ಮನವ ವಂಚಿಸಿ ನಗದಿರು ....

ಪ್ರಿಯಾ ... 
ಕಪಟವಿಲ್ಲದೆ 
ನೇರ ಮಾತಿನಲೆನ್ನ 
ನೋಯಿಸು ... 
ದುಃಖವಾದರೂ 
ಸಹಿಸುವೆನು
............
ಆದರೆ
ನನ್ನ
ಮೆಚ್ಚಿಸಲು
ಸುಳ್ಳು
ಕಥೆಯ ಹೆಣೆದು
ಸತ್ಯದಂತೆ
ಬಣ್ಣಿಸಿ
ಮುಗ್ದ ಮನವ
ವಂಚಿಸಿ
ನಗದಿರು ....

ಅಪ್ಪನ ಕರ ...

ಅಂದು
ಬಾಲ್ಯದಲಿ 
ನಾ ಬಯಸಿದ್ದು 
ಪಡೆಯಲು 
ಅತ್ತಾಗ
ಹೊಡೆದು
ನೋಯಿಸಿದ
ಜವಾಬ್ದಾರಿ
ಅಪ್ಪನ
ಕರ ...
ಇಂದು ನಾ
ಬಯಸಿದ್ದು ಸಿಗದೆ
ದುಃಖಿಸುವುದು
ಕಂಡೊಡೆ
ಬಳಿ ಕರೆದು
ಕಣ್ಣೀರನೊರೆಸುತಿದೆ ...

ನನ್ನ ಮುಗ್ದ ಕನಸುಗಳಿಗೆ ...

ನನ್ನ 
ಮುಗ್ದ 
ಕನಸುಗಳಿಗೆ 
ಭಾವನೆಗಳ 
ತಡೆಗೋಡೆ ... 
.........
ಮೊಗವ
ಮುದ್ದಿಸುತಿರಲು
ತುಟಿಗೆ
ಚುಚ್ಹುತಿವೆ
ಮೊಡವೆಗಳು ... !!!

ನನ್ನ ತುಟಿಯ ಸ್ಪರ್ಶಕೆ ...

ನನ್ನ ತುಟಿಯ 
ಸ್ಪರ್ಶಕೆ ... 
ಉಬ್ಬಿದ 
ನಿನ್ನ ಉದರವ 
ಕಂಡು 
ನಗಲಿಲ್ಲ
ಜನರು ...

ಸಂತಸದಿ
ನಿನ್ನ ಬಯಸಿ
ಕೈ -ಕೈ ಬದಲಿಸಿ
ಆಟವಾಡಿದರು
ಮುಗ್ದ ಮಕ್ಕಳು ...

ನೀ
ಕೊಪಿಸಲಿಲ್ಲ ...

ಕೊನೆಗೆ
ನಿನ್ನ ಉದರ
ಬಿರಿದು "ಟಪ್ "
ಎಂದಾಗ
ನಕ್ಕಿದ್ದು
ಹಿರಿಯರು ..
ಅತ್ತಿದ್ದು
ಮುಗ್ದ ಮಕ್ಕಳು ..

ಬೆಲೂನ್
ಒಡೆಯಿತೆಂದು .... !!!

ಗಾಂಧಿ ಮೊಗವ ನೋಡಿ ಮುದ್ದಿಸುವ ಆಸೆ ...

ಇಲ್ಲೊಬ್ಬ 
ಕುಡುಕನಿಗೆ 
ಅನುದಿನವು 
ಗಾಂಧಿ ಮೊಗವ 
ನೋಡಿ 
ಮುದ್ದಿಸುವ
ಆಸೆ ...

ಈತ ಮೆಚಿದ್ದು
ಗಾಂಧಿ ಭೋದಿಸಿದ
ತತ್ವ
ಅಹಿಂಸೆ
ಮಧ್ಯ ವಿರೋಧಿ ನೀತಿ
ಇದೇನೂ
ಅಲ್ಲ ...

೧೦೦೦
ಎಂದು
ಬರೆದ
ಹಾಳೆಯಲಿ
ಅನುದಿನವು
ನಗುತಲಿರುವನು ..
ಅದಕೆ... !!!

ಬಚ್ಚಿಟ್ಟ ನಿನ್ನ ಕನಸುಗಳು ..

ಗೆಳೆಯಾ 
ನನ್ನೀ ಹೃದಯದಲಿ 
ಬಚ್ಚಿಟ್ಟ 
ನಿನ್ನ 
ಕನಸುಗಳು 
ನೀನರಿಯದೇ
ಚೆಲ್ಲಿ ಹೋದುವು ...
.......
ಕಣ್ಣೀರ
ಹನಿಗಳಾಗಿ ... 

ಬೇಗುದಿಯ ಬೆಸಲು ...

ನೀ 
ಹಿಂತಿರುಗಿ ನೋಡದೆ 
ನಡೆಯುತಿರಲು 
ಸವೆದ ದಾರಿಯ 
ಬೆನ್ನಾರೆ 
ಬೆಳೆಯುತಿತ್ತು
ಬೇಗುದಿಯ
ಬೆಸಲು ... !!!

ಕನಸುಗಳಿಂದು ಚಿಗುರುತಿವೆ ...

ಅಂದು 
ನೀ ಹೇಳದೆ 
ಹೊರಟಾಗ 
ನನ್ನೆದೆಯಲಿ 
ಸತ್ತ 
ಕನಸುಗಳಿಂದು
ಚಿಗುರುತಿವೆ
........
ಅಕ್ಷರಗಳಾಗಿ ... !!!

ಕವನದ ಪದಗಳಿಗೆ ಮರಣ ...



ನನ್ನ
ನೋವುಗಳು
ಹೊರಟ
ಮರುಘಳಿಗೆಯಲಿ
ಬರಬಹುದು 
ನನ್ನ
ಕವನದ
ಪದಗಳಿಗೆ
ಮರಣ ... !!!