Wednesday, 20 November 2013

"ನೋವು ನಿವಾರಕ ಔಷಧಿಗಳಿಗೆ ಸಮೀಪಿಸಿ "



ಮಹಡಿಯ ಮೇಲಿರುವ
ಮನೆಯ
ದಂಪತಿಗಳ
ಜಗಳವ ದಿನವೂ
ಕಂಡು - ಕೇಳಿ 
ನೆಲಮಹಡಿಯ
ಅಕ್ಕ ಪಕ್ಕದ
ಇಬ್ಬರು ವ್ಯಾಪಾರಿಗಳು
ಜೊತೆ ಸೇರಿ
ಫಲಕ ಬರೆಯಿಸಿದರು ...
"ನೋವು ನಿವಾರಕ
ಔಷಧಿಗಳಿಗೆ ಸಮೀಪಿಸಿ "
ಒಬ್ಬನದು ಔಷಧಿ ಅಂಗಡಿ
ಇನ್ನೊಬ್ಬನದು
ಮಧ್ಯದಂಗಡಿ .

No comments: