Friday, 1 November 2013

ಸಂತಸ .......

ತನ್ನ ಮಡಿಲಲಿ 
ಕೂಸು 
ಮೊಲೆ ಹಾಲು
ಕುಡಿದು ತೇಗಿ 
ನಕ್ಕಾಗ..... 
ನಿನ್ನೆಯಿಂದ ಉಣ್ಣದ
ಹೆತ್ತಬ್ಬೆಯ ಕಣ್ಣಲ್ಲಿ
ನೀರು ತುಂಬಿತ್ತು ..
......... ಕಾರಣ
ಅವಳ ಹಸಿವಲ್ಲ
ಕೂಸಿನ ಹೊಟ್ಟೆತುಂಬಿತೆಂದು
ತಿಳಿಸಿದ
ತೇಗಿನ ಶಬ್ದ..

No comments: