Friday, 22 November 2013

ನೀರು ಕುಡಿದು ಸಾಯುವಾಸೆಯಿದೆಯಂತೆ ಮುತ್ತಾತನಿಗೆ .....

ಮುತ್ತಾತ 
ದಿನವೂ ಕರ ಮುಗಿದು 
ಪ್ರಾರ್ಥಿಸುತಿರಲು 
ಪಕ್ಕದಲಿ 
ನಾ ಕೇಳಿಸುತಿದ್ದೆ 
ಒಂದೆರಡು ಗುನುಗುವ 
ಶಭ್ದಗಳು .. 
ಟೀವಿ -ಧಾರಾವಾಹಿ ..
ಉದ್ದೇಶವನರಿಯಲು  
ಉತ್ಸುಕುದಲಿ 
ಕೇಳಲು 
ಕೊನೆಗೂ 
ಹೇಳಿದರು 
ವಿವರವಾಗಿ ... 

'ಒಡೆಯಾ ... 
ಟೀವಿಯಲಿ 
ಧಾರವಾಹಿ 
ಸಂಪ್ರೇಕ್ಷಣೆಯ ಸಮಯದಲಿ 
ಕಳುಹಿಸದಿರು 
ಜವರಾಯನ ... 
ಪ್ರಾಣ ಪಕ್ಷಿ ಹಾರುವ ಸಮಯದಲಿ ..
ಮಕ್ಕಳು-ಮೊಮ್ಮಕ್ಕಳು 
ತಂದು ಕೊಡರು .. 
ಒಂದು ಲೋಟ ನೀರು 
ನಾ ಬೊಬ್ಬಿಟ್ಟರೂ .. '

ಅದ ಕೇಳಿ 
ನಾನೂ ಪ್ರಾರ್ಥಿಸತೊಡಗಿದೆ 
ನೆರವೇರಲೆಂದು 
ಅವರ ಅಭಿಲಾಷೆ ... . 

'ಜಾಹಿರಾತಿನ 
ಸಮಯವ ನೋಡಿ 
ನೀ 
ಕಳುಹಿಸು .. 
ಜವರಾಯನ ... 
ಕೊನೆಗಳಿಗೆಯಲಿ 
ನೀರು ಕುಡಿದು 
ಸಾಯುವಾಸೆಯಿದೆಯಂತೆ 
ಮುತ್ತಾತನಿಗೆ ..... '


No comments: