Wednesday, 20 November 2013

ಹುಚ್ಚು ಮನಸ್ಸಿನ ತವಕ

ಅಮ್ಮಾ .... 
ಇಂದೆನೆಗೆ 
ಸಾವಿನ ಭಯವಿಲ್ಲ 
ಅಸ್ವಸ್ತನಾದೊಡೆ 
ನೋವಿಲ್ಲ ..
ಮನದೊಳಗೆ
ಸಂತಸದ ಕೊರತೆಯಿದ್ದರೂ
ಜೀವನದಲ್ಲಿ
ಜಿಗುಪ್ಸೆಯಿಲ್ಲ ..
ಇಹಲೋಕದಲಿ
ಆಸೆ ತೀರುವ ವರೆಗೆ
ಜೀವಿಸಿದೆ .. ಎಂದಲ್ಲ
ಅಮ್ಮಾ
ನಿನ್ನ ನೆನೆದೆನಗೆ
ಉಮ್ಮಳ
ನಾ ಶವವಾದೊಡೆ
ನೀ ನಡೆದ ಮನೆಯತ್ತ
ಹೊತ್ತಯ್ವರೆನ್ನ ...
ಅತ್ತಕಡೆ ನಿನ್ನ ಬಂದು ಕಾಣಲು
ಹುಚ್ಚು ಮನಸ್ಸಿನ
'ತವಕ

No comments: