Wednesday, 20 November 2013

ಅಂತಿಮ ವಿದಾಯ ಹೇಳುವ ದಿನ ...



ಮುಂದೊಂದು ದಿನ
ಬರಬಹುದು...
ಅಂತಿಮ ವಿದಾಯ
ಹೇಳುವ ದಿನ ...
ಮಲಗಿರಲು 
ಕನಸುಗಳ ಸುಳಿವಿರದು
ಕೇಳಿಸಬಹುದೊಂದು
ಅಶರೀರವಾಣಿ ...
'ನಿಷ್ಪ್ರಪಂಚವಾಗಿರುವಿ...
ಸ್ತಬ್ದವಾಗಿದೆ ಈ ನಿನ್ನ
ಹೃದಯ ಕ್ರಿಯೆ..
ತೆರೆ ಎಳೆದಿರುವೆ
ನಿನ್ನ ಕನಸುಗಳಿಗೆ .. '

ಒಳಗಣ್ಣು ತೆರೆದಾಗ ...
ಕಾಣಬಹುದು - ಕೇಳಬಹುದು
.....
ಪುರುಷರ ನೀರವ ಮೌನ..
ಪಲುಂಬುವ
ಸ್ತ್ರೀ ಶಬ್ಧಗಳು ...

No comments: