Monday, 4 November 2013

ಶ್ರಮ ..

ತನ್ನವನ ತೃಪ್ತಿ ಪಡಿಸುವಾಗ 
ಹೆಂಡದ, 
ಬೆವರಿನ 
ವಾಸನೆ ಮೂಗಿಗೆ 
ಬಡಿದು 
ಒಗಡಿಕೆ ಬಂದರೂ
ಒಲ್ಲೆ ಎನದೆ ಸಹಿಸಿದಳಾಕೆ ...
ಕಂದಮ್ಮಗಳ
ಹೊಟ್ಟೆ ತಣಿಸಲು
ಕಷ್ಟಪಡುವ
ತನ್ನವನ
ಜವಾಬ್ದಾರಿತನಕೆ
ತಾ ಕೊಡುವ ಕೂಲಿ
ಎಂದು
ತನ್ನಲ್ಲೇ ಖುಷಿ ಪಟ್ಟಳು ...

ಒಗಡಿಕೆ =ಓಕರಿಕೆ , ವಾಂತಿ

No comments: