ಕವನ ಬರೆಯಲು ಬಲು ಸುಲಭ ..
ಮೊದಲು ನೀ ನೆಡು
ವಿಷಯವೆಂಬ ಗಿಡ
ವಿರಹದ ಗೊಬ್ಬರವ ಹಾಕು
ಉಪ್ಪಿನ ಕಣ್ಣೀರ ಥಳಿಸು ..
ಗಿಡ ಬೆಳೆವುದ ನೋಡಿ ನಗು ...
ನಂತರ ನೀ ಪೋಗು ಭ್ರಮೆಯೆಂಬ
ಲೋಕಕೆ ..
ಅದರಲರಳುವ ಹೂವ ನೆನೆಸು
ಅರಳಿದ ಹೂವ ಮೂಸಿ
ಪರಿಮಳವ , ಸುಗಂಧವ
ಅನುಭವಿಸು ..
ಕೊನೆಗೆ ಆ ಹೂವು
ಬಾಡಿದಂತೆ ಗ್ರಹಿಸು ...
ಇನ್ನು ನೀ ತೆಗೆ
ಲೇಖನಿಯ ...
ಗೀಚುತ ಹೋಗು
ನಿನ್ನ ಗ್ರಹಿಕೆಯ ...
ಕೊನೆಗೆ
ಕಾಣುವುದು ನೀ ನೆಟ್ಟ
ಗಿಡದಲಿ
ಶ್ರೀಮಂತ ಫಸಲು ..
ಮೊದಲು ನೀ ನೆಡು
ವಿಷಯವೆಂಬ ಗಿಡ
ವಿರಹದ ಗೊಬ್ಬರವ ಹಾಕು
ಉಪ್ಪಿನ ಕಣ್ಣೀರ ಥಳಿಸು ..
ಗಿಡ ಬೆಳೆವುದ ನೋಡಿ ನಗು ...
ನಂತರ ನೀ ಪೋಗು ಭ್ರಮೆಯೆಂಬ
ಲೋಕಕೆ ..
ಅದರಲರಳುವ ಹೂವ ನೆನೆಸು
ಅರಳಿದ ಹೂವ ಮೂಸಿ
ಪರಿಮಳವ , ಸುಗಂಧವ
ಅನುಭವಿಸು ..
ಕೊನೆಗೆ ಆ ಹೂವು
ಬಾಡಿದಂತೆ ಗ್ರಹಿಸು ...
ಇನ್ನು ನೀ ತೆಗೆ
ಲೇಖನಿಯ ...
ಗೀಚುತ ಹೋಗು
ನಿನ್ನ ಗ್ರಹಿಕೆಯ ...
ಕೊನೆಗೆ
ಕಾಣುವುದು ನೀ ನೆಟ್ಟ
ಗಿಡದಲಿ
ಶ್ರೀಮಂತ ಫಸಲು ..
No comments:
Post a Comment