ಪ್ರಿಯೇ
ನಾವಂದು
ಓಡಾಡುತಿದ್ದ
ದಾರಿಯಲಿಂದು ನಡೆದಿದ್ದೆ
ನಾನೊಬ್ಬನೇ
ಬರಿಗಾಲಲಿ ನಡೆವಾಗ
ನಮ್ಮನ್ನು ಚುಚ್ಹುತಲಿದ್ದ
ನಮ್ಮ ಶತ್ರುಗಳು
ಆ ಕಲ್ಲು ಮುಳ್ಳುಗಳು
ಕಾಣಿಸಲೇ ಇಲ್ಲ
ಕಪ್ಪು ಕಂಬಳಿಯ ಹೊದ್ದು
ಹೊಸ ರೂಪದೊಂದಿಗೆ
ರಸ್ತೆಯೆಂಬ ನಾಮ ಪಡೆದು
ನಗುತ ಮಲಗಿತ್ತು
ಚಿಂತೆಗಳಿಲ್ಲದೆ
ಪರಿಚಯದ ಮಾವು
ಹಲಸು , ತೆಂಗು , ಕಂಗು
ಮರಗಳೆಲ್ಲ
ಮುಗುಳ್ನಗೆ ಬೀರಿದುವು
ದಾರಿಯುದ್ದಕ್ಕೂ
ಕಲ್ಲು ಮುಳ್ಳುಗಳಿಲ್ಲದಿದ್ದರೇನಂತೆ
ದಾರಿಯುದ್ದಕ್ಕೂ ಚುಚ್ಹುತಲಿತ್ತು
ನನ್ನ ಹೃದಯವನು
ನಿನ್ನ ನೆನಪುಗಳು
ನಾವಂದು
ಓಡಾಡುತಿದ್ದ
ದಾರಿಯಲಿಂದು ನಡೆದಿದ್ದೆ
ನಾನೊಬ್ಬನೇ
ಬರಿಗಾಲಲಿ ನಡೆವಾಗ
ನಮ್ಮನ್ನು ಚುಚ್ಹುತಲಿದ್ದ
ನಮ್ಮ ಶತ್ರುಗಳು
ಆ ಕಲ್ಲು ಮುಳ್ಳುಗಳು
ಕಾಣಿಸಲೇ ಇಲ್ಲ
ಕಪ್ಪು ಕಂಬಳಿಯ ಹೊದ್ದು
ಹೊಸ ರೂಪದೊಂದಿಗೆ
ರಸ್ತೆಯೆಂಬ ನಾಮ ಪಡೆದು
ನಗುತ ಮಲಗಿತ್ತು
ಚಿಂತೆಗಳಿಲ್ಲದೆ
ಪರಿಚಯದ ಮಾವು
ಹಲಸು , ತೆಂಗು , ಕಂಗು
ಮರಗಳೆಲ್ಲ
ಮುಗುಳ್ನಗೆ ಬೀರಿದುವು
ದಾರಿಯುದ್ದಕ್ಕೂ
ಕಲ್ಲು ಮುಳ್ಳುಗಳಿಲ್ಲದಿದ್ದರೇನಂತೆ
ದಾರಿಯುದ್ದಕ್ಕೂ ಚುಚ್ಹುತಲಿತ್ತು
ನನ್ನ ಹೃದಯವನು
ನಿನ್ನ ನೆನಪುಗಳು
No comments:
Post a Comment