Monday, 4 November 2013

ಪುಟ್ಟನ ದೀಪಾವಳಿ (ಮಕ್ಕಳಿಗಾಗಿ )


ಪುಟ್ಟ 
ಬಲು ತುಂಟ
ಶಾಲಾ ಕೊಠಡಿಯಲಿ 
ಸುಟ್ಟ
ಮಾಲೆ ಪಟಾಕಿ ..
ಟಪ್ .. ಟಪ್ .. ಟಪ್

ಶಭ್ದಕೇಳಿ
ಓಡಿ ಬಂದ್ರು ಮೇಷ್ಟ್ರು
ಬೆನ್ನಮೇಲೆ
ಸುಟ್ಟರು
ಪೆಟ್ಟಿನ ಮಾಲೆ
ರಪ್ .. ರಪ್ .. ರಪ್

No comments: