Friday, 1 November 2013

ಫೇಸ್ ಬುಕ್ ಪ್ರಭಾವ



ದೂರ ಪ್ರಯಾಣ 
ಮಾಡುವಾಗ 
ನಡುದಾರಿಯಲ್ಲಿ 
ವಿಶ್ರಾಂತಿ ಪಡೆಯಲು 
ಗೂಡಂಗಡಿ ಬಳಿ 
ವಾಹನ ನಿಲ್ಲಿಸಿ 
ಸಿಗರೇಟು ಹಚ್ಚುವಾಗ
ಅಂಗಡಿಯಾತನಲ್ಲಿ 
ಸುಮ್ಮನೆ 
ಕೇಳಿದೆ .... 
ಹೇಗಿದೆ ವ್ಯಾಪಾರ .... ??
ಪಕ್ಕದಲಿದ್ದ 
ಎಳನೀರು, ದಾಳಿಂಬೆ 
ಚಾಕಲೇಟು 
ಬೀಡಿ ಸಿಗರೇಟು ತೋರಿಸಿ 
ಅವನೆಂದ ... 
ಬೆಳಿಗ್ಗಿಂದ ಇಷ್ಟೆಲ್ಲಾ 
ವಿಷಯ ತಂದು 
ಪೋಸ್ಟ್ ಮಾಡಿದ್ದೇನೆ ...
ವಿಸಿಟರ್ಸ್ ಕಮ್ಮಿ ..  
ಒಂದು ಲೈಕೊ  ಇಲ್ಲ 
ಕಾಮೆಂಟ್ಸೂ ಇಲ್ಲ ... 

1 comment:

Subhashini Hiranya said...

 ಕನ್ನಡ ಬರವಣಿಗೆಗಳಿಗೆ ಸದಾ ಪ್ರೊತ್ಸಾಹ ಕೊಡುವವರು ನಾವು.