Wednesday, 20 November 2013

ಪ್ರಿಯೇ .. ನನಗರಿವಿದೆ ..

ಪ್ರಿಯೇ ..
ನನಗರಿವಿದೆ .. 
ನೀನೊಂದು ವನಸುಮ .. 
ನನ್ನ ಮರೆತು ಯಾ 
ಮರೆತಂತೆ ನಟಿಸಿ 
ಕಾನನದಲ್ಲಿ
ನಗುತಿದ್ದರೂ
ಅಳುತಿದ್ದರೂ
ನಾ ಕಾಣುವೆನು
ನಿನ್ನ ನಗುವನು
ನಿನ್ನ ಅಳುವನು ...
ನೀನು 

ಭುವನ ಮೋಹಿನಿಯಾದರೆ 
ನಾನು...
ಭುವನನಯನ
ಎಲ್ಲಿದ್ದರೂ ನಿನ್ನ
ಇರುವು ಕಾಣುವೆನು .. .

(ಭುವನ ಮೋಹಿನಿ =ಜಗತ್ತನ್ನೇ ಮೋಹಗೊಳಿಸುವವಳು
ಭುವನನಯನ = ಸೂರ್ಯ

No comments: