Thursday, 21 November 2013

***ಮಧ್ಯ ಕಲಿಸುವ ಭಾಷೆ ***



ವಲಸೆ ಬಂದು 
ತಂಗಿರುವ 
ಪಕ್ಕದ್ಮನೆ ತಮಿಳಮ್ಮ
ಆಡುವ  ಭಾಷೆ 
ತಮಿಳು ... 

ತಮಿಳಮ್ಮನ ಮಕ್ಕಳು  
ಶಾಲೆಗೆ 
ಹೋಗಿ 
ಕಲಿವ ಭಾಷೆ 
ಕಸ್ತೂರಿ ಕನ್ನಡ .... 

ಅಕ್ಷರವೇ ಕಲಿಯದವ  
ಅವರಪ್ಪ ತಮಿಳಪ್ಪ  

ಕೂಲಿ ಕೆಲಸ ಮುಗಿಸಿ 
ಮುಸ್ಸಂಜೆಯಲಿ 
ವಾಲುತ  ಬಂದು 
ಮಡದಿ-ಮಕ್ಕಳನು  
ಬಯ್ಯುಲು 
ಬಳಸುವ 
ಭಾಷೆ ಮಾತ್ರ 
ಇಂಗ್ಲೀಷು ....!!! 

No comments: