Thursday, 21 November 2013

ಹಸಿರಾಗಿವೆ ಅಮ್ಮನ ನೆನಪುಗಳು ..

ಅಮ್ಮಾ . 
ನೀ ನೆಟ್ಟ 
ತೆಂಗು- ಬಾಳೆ 
ಮಾವು -ಪೇರಳೆ 
ಗಿಡ-ಮರಗಳ 
ಹಸಿರಲ್ಲಿ ... 
ಕಾಣುವೆವು 
ನಿನ್ನ ಮೊಗವನ್ನು 
ನಿನ್ನ ನಗುವನ್ನು ..

ದಿನವೂ 
ನೀರೆರೆಯುತಿರುವೆವು 
ನಾವಿಂದು...  

ಹಸಿರಾಗಿರುವುದು 
ನಿನ್ನ ನೆನಪುಗಳು
ಜೊತೆಗೆ 
ನೀನೆಟ್ಟ ಗಿಡ-ಮರಗಳು .. 

No comments: