Wednesday, 13 November 2013

ವ್ಯತ್ಯಾಸ



ಅವಳು ಬರೆದಿದ್ದಳು 
ಇಲ್ಲಿ ... 
ಮುಖಪುಟದಲ್ಲಿ 
ಉಷಾರಿಲ್ಲ ..
ಶೀತ , ಜ್ವರ ...

ಕಾಮೆಂಟುಗಳ ಸುರಿಮಳೆ ..
ವೈದ್ಯರ ಬಳಿ ಹೋಗಿಲ್ಲವೇ ..
ಮಾತ್ರೆ ನುಂಗಿದಿರಾ
ಕಷಾಯ ಕುಡಿದ್ರಾ ..

ಅವನೂ ಬರೆದಿದ್ದ ...
ಆಸ್ಪತ್ರೆಯಲ್ಲಿರುವೆ
ಕಾಲು ಮುರಿದಿದೆ ...
ವಾರಗಳೇ ಬೇಕೆನೆಗೆ
ಸುಧಾರಿಸಲು ..

ಹೇಳೋರೂ
ಇಲ್ಲ
ಕೇಳೋರಂತೂ
ಇಲ್ಲವೇ
ಇಲ್ಲ..

ಎರಡು ದಿನಗಳ ನಂತರ
ನೋಡಿದಾಗ
ಎರಡು ಲೈಕು ಗಳು
ಒಂದು ಕಾಮೆಂಟು ...
'ಇನ್ನೂ ನಿನ್ ಕಾಲು
ಸರಿಯಾಗಿಲ್ವಾ .... '

(facebook ನಲ್ಲಿ ಕಂಡ ಒಂದು ವ್ಯಂಗ್ಯ ಮಾತಿನ/photo ದಿಂದ ಪ್ರೇರಿತ )

No comments: