Thursday, 25 August 2016

ನಿರಾಸೆಯೆಂದರೆ ..

ಅನುಗಾಲ 
ಮರೆಯದ 
ಮರೆಯಲಾಗದ 
ನಿರಾಸೆಯೆಂದರೆ ... 
ಹಸೆಮಣೆಯೇರಿ 
ವರುಷಗಳು ಸಂದು 
ಕೊನೆಗೆ ..... 
ಕಣ್ಣಿಗೆ ಕಾಣುವ ವೈದ್ಯರ
ಕಣ್ಣಿಗೆ ಕಾಣದ ದೇವರ
ಮೊರೆಹೊಕ್ಕು
ದಕ್ಕಿದ ಭಾಗ್ಯವ .... 
ಉಬ್ಬಿದ ಉದರವ
ಮುಟ್ಟಿ
ನಗುತ ಕನಸ ಕಾಣುತ
ಕಾಲ ಕಳೆಯುತಿರಲು ...
ಕಂದನ
ಪುಟ್ಟ ಕಾಲು
ಕಾಣುವ ಮೊದಲೇ
ಭುವಿಯ ಕಾಣಲು
ಕಣ್ಣು ತೆರೆಯದೆ
ಹೊರಟ
ಕಂದಮ್ಮನಲಿ
ಇಟ್ಟಿದ್ದ
ಭರವಸೆಯ ಪತನ ... !!!

ಕೆ.ಎ. ಎಂ. ಅನ್ಸಾರಿ 

No comments: