Tuesday, 26 November 2013

ನನ್ನವ್ವ....

ಒಂಭತ್ತು 
ತಿಂಗಳು ಒಡಲಲಿರಿಸಿ 
ಹೆತ್ತು 
ತುತ್ತು ಕೊಟ್ಟು 
ಮುದ್ದಿಸಿ 
ಬೆಳೆಸಿದ 
ನನ್ನವ್ವ 
ಇಹವ ತೊರೆದು 
ಆಯ್ತು 
ತಿಂಗಳು 
ಒಂಭತ್ತು ... 

ನನಗಿನ್ನೂ 
ಬಂದಿಲ್ಲ ... 
ಚಿತ್ತಸ್ವಾಸ್ಥ್ಯ 

ದಿನವೂ  ಹೊತ್ತು 
ಅತ್ತು .. ಅತ್ತು ...
ಕಳೆದರೂ 
ಬತ್ತಿಲ್ಲ 
ಕಣ್ಣೀರ ಕಡಲು ...!!!


(ಚಿತ್ತಸ್ವಾಸ್ಥ್ಯ =ಮನಶ್ಯಾಂತಿ
ಹೊತ್ತು ಎಂಬ ಪದಕ್ಕೆ - ಅತೀವ ದುಃಖದಿ ಎಂಬ ಅರ್ಥವೂ ಇದೆ )

1 comment:

Badarinath Palavalli said...

ಆಕೆ ಅಲ್ಲಿಂದಲೇ ಕಾಯುವರು ನಿಮ್ಮನೆಲ್ಲ.