Thursday, 7 November 2013

ನೀನೊಂದು ವನಸುಮ .

ಪ್ರಿಯೇ ..
ನನಗರಿವಿದೆ .. 
ನೀನೊಂದು ವನಸುಮ .. 
ನನ್ನ ಮರೆತು ಯಾ 
ಮರೆತಂತೆ ನಟಿಸಿ 
ಕಾನನದಲ್ಲಿ 
ನಗುತಿದ್ದರೂ
ಅಳುತಿದ್ದರೂ 
ನಾ ಕಾಣುವೆನು 
ನಿನ್ನ ನಗುವನು 
ನಿನ್ನ ಅಳುವನು ... 
ನೀನು 
ಭುವನಮೊಹನಿ ಯಾದರೆ 
ನಾನು...  
ಭುವನನಯನ
ಎಲ್ಲಿದ್ದರೂ ನಿನ್ನ 
ಇರುವು ಕಾಣುವೆನು ..  . 

(ಭುವನಮೊಹನಿ=ಜಗತ್ತನ್ನೇ ಮೋಹಗೊಳಿಸುವವಳು 
 ಭುವನನಯನ = ಸೂರ್ಯ )

1 comment:

Badarinath Palavalli said...

"ಭುವನನಯನ = ಸೂರ್ಯ" ತುಂಬಾ ಒಳ್ಳೆಯ ಪ್ರಯೋಗ.