Thursday, 9 January 2014

ಹುಚ್ಚು ಮನಸು ....

ಅಂದು 
ನಿನಗಾಗಿ ಕಾದಿದ್ದ 
ಓಣಿಯಲಿಂದು 
ನಿಂತಿದ್ದೆ 
ಒಂದರೆ ಘಳಿಗೆ ... 
ನಿನ್ನ ಬರುವಿಕೆಗೆ
ಕಾದು ...
ಹುಚ್ಚು ಮನಸು ....

ಅಂದು ನಿನ್ನ ಥಳುಕು ಬಳುಕ
ಇಣುಕಿ ನೋಡುತಿದ್ದ
ಕಾಕನ ಅಂಗಡಿಯ
ಮುರುಕು ಬೆಂಚಿನಲಿಂದು
ಕುಳಿತು ಕಾದಿದ್ದೆ ...
ನಿನ್ನ ಬರುವಿಕೆಗೆ ಕಾದು
ಹುಚ್ಚು ಮನಸು ....

ಕರ್ಕಶ ಶಬ್ಧವ
ಹೊರಡಿಸಿ ಓಡುವ
ಆ ಬಸ್ಸಿನ ಸೀಟಿನಲಿ
ಪುಸ್ತಕವನಿಟ್ಟು
ಆಸನವ ನಿನಗಾಗಿ
ಕಾಯ್ದಿರಿಸಿದೆ
ಕುಳಿತುಕೊಳ್ಳಲು ನೀನಿಲ್ಲ ...
ಹುಚ್ಚು ಮನಸು ...

ವರುಷಗಳುರುಳಿದರೂ
ಹರುಷದ ನಿಮಿಷಗಳ
ಮರೆತಿಲ್ಲ ...
ಇನ್ನೂ ಜೀವಂತವಾಗಿದೆಯೆಂಬ
ಕಲ್ಪನೆಯಲಿ
ಜೀವಿಸುತಿದೆ

ಹುಚ್ಚು ಮನಸು ... !!!

No comments: