Thursday, 9 January 2014

ಜಗದೊಡೆಯಾ ...

ಜಗದೊಡೆಯಾ .. 
ಹಲವು ದಿನಗಳಿಂದ 
ಕಾಡುತಿದೆ - 'ಸಂಶಯ' 
ಉತ್ತರವಿಲ್ಲದೆ- 
ಉತ್ತರವನರಿಯದೆ ... 
ಕೊರಗುತಿರುವೆ ..

ಅಲ್ಲಿ ..
ನೀನಂದ
ವೇದಗ್ರಂಥ ಗಳಲಿ
ಉಲ್ಲೇಖಿಸಿದ
ಸ್ವರ್ಗ - ಸ್ವರ್ಗ ಸುಖ
ರಂಭೆ -ಊರ್ವಶಿ-ಮೇನಕೆ
ಸುರಪಾನ ...
ಎಲ್ಲಾ ಇರುವುದಂತೆ ... !!!

ಏನಿದ್ದರೂ
ತಾಯ ಮಡಿಲಲಿ ತಲೆಯಿಟ್ಟು
ಮಲಗಿರಲು - ಆ ಸ್ನೇಹ ಮಾತೆ
ತಲೆಗೂದಲಲಿ ಕೈಯಾಡಿಸಿ - ನೇವರಿಸುತಿರಲು
ಸಿಗುವ ಸುಖ -ಸಂತೋಷ -ನೆಮ್ಮದಿ
ನೀನಂದ
ಅಲ್ಲಿ ಆ ಸ್ವರ್ಗದಲ್ಲಿ ಸಿಗಬಹುದೇ ...???

No comments: