Thursday, 9 January 2014

***ನನ್ನಜ್ಜಿ ಮತ್ತು ಕ್ರಿಸ್ತ್ಮಸ್ ***

ನನ್ನಜ್ಜಿಮನೆಯ 
ಎದುರು ಮನೆಯೊಡೆಯ 
ಜಾನ್ ಡಿಸೋಜಾ 
ಕ್ರಿಸ್ಮಸಿಗೆ ತಂದಿದ್ದರು
ತುಂಡರಿಸಿದ ಕೋಳಿ ಮಾಂಸ . ...

ಸಂಪ್ರದಾಯಸ್ತೆ ಅಜ್ಜಿಯ
ಮನದಲಿ ಗೊಂದಲ ..
ಪ್ರೀತಿಯ ಕಾಣಿಕೆ ..
ಹಲಾಲ್ ಮಾಡಿರಬಹುದೋ ..
ಬೇಡ ವೆನ್ನುವುದಾದರೂ
ಹೇಗೆ ...

ಸೋಜರ ಒತ್ತಾಯ ..
ಅಜ್ಜಿ ತಗೊಳ್ಳಿ ..
ಧರ್ಮ ಗುರುಗಳು
ಕೊಯ್ದದ್ದು
ಚಿಂತಿಸದಿರಿ ...

ಆ ಮಾತ ಕೇಳಿ ನಂಬಿ
ನಾನು ನಮ್ಮಜ್ಜಿ
ಅಂದೇ ದಿನ ರಾತ್ರಿ
ಮಾಡಿ ತಿಂದೆವು
ತಿಂದು ಮುಗಿಸಿದೆವು ..
ಚಿಕ್ಕನ್ ಚಿಲ್ಲಿ ...

ಮರುದಿನ ಎದುರು ಮನೆಯಲಿ
ಜನ ಜಂಗುಳಿ .
ಬಿಳಿತೋಪಿನ ಗಡ್ಡಧಾರಿ
ಎನೇನೊ ಮಂತ್ರ ಪಠನ
ಕಯ್ಯಲಿ ಜಪಮಾಲೆ
ಕೊರಳಲಿ ತೂಗುತಿರುವ
ಚಿಕ್ಕ ಶಿಲುಬೆ

ನಾನು ನನ್ನಜ್ಜಿಯೂ
ಕಿಟುಕಿಯಿಂದ
ಇಣುಕು ನೋಟ ...
ಅತ್ತ ಕಡೆಯಿಂದ ಸೋಜರ ಕರೆ
ಬನ್ನಿ ... ಅಜ್ಜೀ ....
ಇವರೇ ನಮ್ಮ ಧರ್ಮಗುರು ...
ನಿನ್ನೆಯ ಕೋಳಿಯನು
ಹಲಾಲ್ ಮಾಡಿದ
ಧರ್ಮಗುರುಗಳು ...

ನನ್ನಜ್ಜಿಯ ಮುಖದಲ್ಲಿ ಆತಂಕ ...
ಮೌನದಲಿ ಮಾತು ..
ದೇವ ನಾಮ ..
ಅಸ್ತಗಫಿರುಲ್ಲ್ಲಾಹ್ಹ್ ...

(ಹಲಾಲ್= ಇಸ್ಲಾಂ ನಿಯಮವನುಸಾರವಾಗಿ/ದೈವನಾಮ ಹೇಳಿ ಕತ್ತರಿಸಿದ್ದು
ಸೋಜರು = ಕ್ರೈಸ್ತರು - (ಊರ ಭಾಷೆ )
ಅಸ್ತಗಫಿರುಲ್ಲ್ಲಾಹ್ಹ್ = ತಪ್ಪು ಮಾಡಿದ್ದಕ್ಕೆ ಪ್ರಾಯಶ್ಚಿತ ಮಾಡುವಾಗ ಉಪಯೋಗಿಸುವ ಪದ)

No comments: