Thursday, 9 January 2014

ಉಸಿರಿನಲಿ ನೀನಿಲ್ಲದೆ ಹಸಿರಿಲ್ಲ ...

ನೀ ನನ್ನ 
ಉಸಿರೆಂದು 
ನೆನೆದಿದ್ದ 
ಅಂದಿನ ದಿನಗಳಲಿ 
ಜೀವನವೂ 
ಹಸಿರಾಗಿತ್ತು ..
ಇಂದು ಮುದಿಯಾದ
ಉಸಿರಿನಲಿ
ನೀನಿಲ್ಲದೆ
ಹಸಿರಿಲ್ಲ ...

ಒಣ ಮರದ
ಒಣ ಮನದ
ತರಗೆಲೆಗಳಂತೆ
ಕಾಣುವ
ನೆನಪುಗಳಿಗೆ
ಆಗೊಮ್ಮೆ -ಈಗೊಮ್ಮೆ
ಎಂಬಂತೆ
ಚಿಗುರು ಬರುತಿದೆ
ವಿರಹದ ಪದಗಳು ...

ಹುಚ್ಚು ಮನದೊಳಗೆ
ಹಸಿರ ಉಸಿರು
ಎಂದಾದರೊಮ್ಮೆ
ಎಲ್ಲೋ
ಮನದ ಮೂಲೆಯಲ್ಲಿ
ಚಿಗುರಬಹುದೆಂಬ
ಹುಚ್ಚು ಭ್ರಮೆಯ
ಮನದಲ್ಲಿ
ಮೂಡಿಸಲೆಂಬಂತೆ
ವಿರಹದ
ಒಣ ಚಿಗುರು .... !!

No comments: