Saturday, 25 January 2014

ಧಣಿ ಮನೆಯ ಒಕ್ಕಲು ದಲಿತ ಕುಟುಂಬ ...

ಧಣಿ ಮನೆಯ 
ಒಕ್ಕಲು 
ದಲಿತ 
ಕುಟುಂಬ ... 

ಗಂಡು ಜೀವಗಳಿಗೆ
ಹಗಲಿರುಳೆನ್ನದೆ
ತೋಟದ
ಕೆಲಸ ....
ಹೆಣ್ಣು ಜೀವಗಳಿಗೂ
ಕೈತುಂಬಾ
ಕೆಲಸ ...
ಅಗರಬತ್ತಿ
ತಯಾರಿಕೆಯ
ಗುಡಿ ಕೈಗಾರಿಕೆ ....

ಕೊನೆಗೊಂದು ದಿನ ...
ಧಣಿಯ
ಅಗಲಿಕೆಯ ನೋವಿನಲೂ
ಒಕ್ಕಲು ಕುಟುಂಬದ
ನೊಂದ ಮನದಲ್ಲಿ
ಪ್ರತ್ಯುಪಕಾರ- ನೆಮ್ಮದಿಯ
ನಗೆ ....

ಗಂಡು ಜೀವಗಳು
ಮರ ಕಡಿದು
ಚಿತೆಗೆ
ನೆರವಾದರೆ ...
ಹೆಣ್ಣು ಜೀವಿಗಳ
ದುಡಿತ-
ಗಂಧದ ಕಡ್ಡಿ
ಮರಣ ಮನೆಯ
ಧಣಿಯ ಒಡಲ
ಅಂತ್ಯವಿಧಿ ಕರ್ಮದಲಿ
ಸುಗಂಧ
ಪಸರಿಸುತ್ತಿತ್ತು .... !!!

No comments: