Thursday, 9 January 2014

ಹಲವು ರೂಪವ ಕೊಟ್ಟು ಹಲವು ನಾಮದಿ ಕೂಗಿ ...

ಹಲವು ರೂಪವ ಕೊಟ್ಟು 
ಹಲವು ನಾಮದಿ ಕೂಗಿ 
ದ್ವೇಷದ ಬೀಜವ ಬಿತ್ತಿ 
ಕಚ್ಚಾಡುತ 
ತನ್ನ ನಂಬಿಕೆಯ 
ಸಮರ್ಥಿಸುವ
ಜಗದ ಜನರ ಕಂಡು
ಮರುಕ ...
ತಾ
ಸೃಷ್ಟಿಸಿದ
ಮನುಜನ
ಹೃದಯದಿ
ಮಾನವೀಯತೆಯ
ತುಂಬಲು
ಮರೆತಿರುವೆನೋ ಎನ್ನುವ
ಗೊಂದಲ
ಆ ಜಗದೊಡೆಯನಿಗೆ ... !!!

No comments: