Saturday, 25 January 2014

ಬಾಲ್ಯದ ದಿನಗಳ ಹಿಂತಿರುಗಿ ನೋಡಿದಾಗ .

ಮಣಭಾರದ ಪುಸ್ತಕದ 
ಚೀಲವನು 
ಹೊತ್ತು 
ದಾರಿ ಸವೆಸಲು
ಹುಚ್ಹು ಬಯಕೆ ....

ದಾರಿ ಮಧ್ಯದಲಿ
ಗೊಂಚಲ
ನೆಲ್ಲಿಕಾಯಿ ಮರಕೆ
ಕಲ್ಲೆಸೆಯಲು
ಹುಚ್ಹು ಬಯಕೆ ...

ಕಾಕನ ಅಂಗಡಿಯ
ಮುರುಕು
ಬೆಂಚಿನಲಿ ಕೂತು
ಐಸ್ ಕೇಂಡಿ ಚೀಪಲು
ಹುಚ್ಹು ಬಯಕೆ ..

ಕೆರೆಬದಿಯಲಿ ಕೂತು
ಎರೆ ಹುಳವ
ಗಾಳಕೆ ಸುತ್ತಿ
ಮೀನು ಹಿಡಿಯಲು
ಹುಚ್ಚು ಬಯಕೆ ...

ಊರ ಗೆಳೆಯರ
ಜೊತೆಯಲಿ
ಜಗಳವಾದುತ
ಕಬಡಿ ಆಟವಾಡಲು
ಹುಚ್ಚು ಬಯಕೆ ...

ಮಾರಿ ಜಾತ್ರೆಯಲಿ
ಸಂತೆ ಬೀದಿಯ ಓಣಿಯಲಿ
ಅವಿತು ಕುಳಿತು
ಬೀಡಿ ಸೇದಲು
ಹುಚ್ಚು ಬಯಕೆ ...

ಮುರುಕು ಚಪ್ಪರ ಹಾಕಿ
ಗೆರಟೆಯ ತಕ್ಕಡಿ ಮಾಡಿ
ದಿನಸಿ ಅಂಗಡಿಯವನಂತೆ
ವ್ಯಾಪಾರಿಯಾಗಲು
ಹುಚ್ಚು ಬಯಕೆ ...

ಸವೆದ ದಾರಿಯಲಿ
ಮರು ಹೆಜ್ಜೆಯ ಹಾಕಿ
ನೆನಪ ಜೋಳಿಗೆಯಲಿಟ್ಟು
ದಾರಿ ಸವೆಸಲು
ಹುಚ್ಚು ಬಯಕೆ ......

No comments: