Thursday, 9 January 2014

ಕವಿತೆಯ ಬೀಜಗಳು ..

ಮನಸು 
ಹಸಿರಾಗಬಹುದೆಂಬ 
ಹುಚ್ಚು ಕಲ್ಪನೆಯಿಂದ 
ನಾನೂ ಅಳತೊಡಗಿದೆ 
ಬಾನ ಅಳುವಿಗೆ 
ಹಸಿರಾದ
ಭುವಿಯ ಕಂಡು...

ಹಸಿರಾಗಲಿಲ್ಲ ..

ವ್ಯಥೆಯು ಮುಡುಗಟ್ಟಿ
ಬಸಿರಾಗಿ ಮುಕ್ಕುರಿವ
ಮನದೊಳಗಿಂದ
ಮೊಳಕೆಯೊಡೆದವು
ವಿರಹದ ಪದಗಳ ಹೊತ್ತು
ಕವಿತೆಯ
ಬೀಜಗಳು .. !!!

No comments: