ವರುಷಗಳಿಂದ
ಬೆಳೆದು ನಿಂತಿರುವ
ಮಾಮರದಿ
ಹೂವಿಲ್ಲ-ಕಾಯಿಲ್ಲ್ಲ
ಚಿಗುರೂ ಇಲ್ಲ ..
ಕೊಡಲಿಯ ರುಚಿ
ತೋರಿಸಲು
ಮನಸು ಬಾರದಿರಲು
ಮಲ್ಲಿಗೆ ಬಳ್ಳಿಯ ನೆಟ್ಟು
ಮರವ ಏರಬಿಟ್ಟೆ ..
ತನ್ನ ದೇಹವ
ಬಿಗಿದಪ್ಪಿ ಬಳ್ಳಿಯು
ಮೇಲೇರುತಿರಲು
ಪ್ರೀತಿ ಉದಯಿಸಿತು ...
ಗೊಡ್ಡು ಮರವೂ
ಅನುಭವಿಸಿತು ಕಚಗುಳಿ ...
ಬಂದಿತು ಹೊಸ ಹುರುಪು ...
ಮಲ್ಲಿಗೆ ಹೂ ಅರಳಿತು
ಜೊತೆಗೆ
ಮಾವೂ ಚಿಗುರಿತು ...
ಹೂವ ಬಿಟ್ಟು
ನಗುತ ನಿಂತಿತು ....
ಗೊಡ್ಡು ಮರಕೆ
ಪ್ರೀತಿಯ ಸ್ಪರ್ಶ ..
ಹೊಸ ಹುರುಪು
ಪ್ರೀತಿಯ ಅನುಭವ ...
ಬಳ್ಳಿಯ ಬಿಗಿ
ಅಪ್ಪುಗೆಯಿಂದ ... !!!
ಬೆಳೆದು ನಿಂತಿರುವ
ಮಾಮರದಿ
ಹೂವಿಲ್ಲ-ಕಾಯಿಲ್ಲ್ಲ
ಚಿಗುರೂ ಇಲ್ಲ ..
ಕೊಡಲಿಯ ರುಚಿ
ತೋರಿಸಲು
ಮನಸು ಬಾರದಿರಲು
ಮಲ್ಲಿಗೆ ಬಳ್ಳಿಯ ನೆಟ್ಟು
ಮರವ ಏರಬಿಟ್ಟೆ ..
ತನ್ನ ದೇಹವ
ಬಿಗಿದಪ್ಪಿ ಬಳ್ಳಿಯು
ಮೇಲೇರುತಿರಲು
ಪ್ರೀತಿ ಉದಯಿಸಿತು ...
ಗೊಡ್ಡು ಮರವೂ
ಅನುಭವಿಸಿತು ಕಚಗುಳಿ ...
ಬಂದಿತು ಹೊಸ ಹುರುಪು ...
ಮಲ್ಲಿಗೆ ಹೂ ಅರಳಿತು
ಜೊತೆಗೆ
ಮಾವೂ ಚಿಗುರಿತು ...
ಹೂವ ಬಿಟ್ಟು
ನಗುತ ನಿಂತಿತು ....
ಗೊಡ್ಡು ಮರಕೆ
ಪ್ರೀತಿಯ ಸ್ಪರ್ಶ ..
ಹೊಸ ಹುರುಪು
ಪ್ರೀತಿಯ ಅನುಭವ ...
ಬಳ್ಳಿಯ ಬಿಗಿ
ಅಪ್ಪುಗೆಯಿಂದ ... !!!
No comments:
Post a Comment