Thursday, 9 January 2014

ಇನ್ನೊಂದು ಹೊಸವರುಷ ...

ಹೊಸ್ತಿಲಲಿ
ಕಾಯುತಿದೆ 
ಇನ್ನೊಂದು ಹೊಸವರುಷ ... 
ಅಲ್ಪಾಯುಷಿ 
ಹುಚ್ಚು ಶಪಥಗಳಿಗೂ 
ಬರಲಿದೆ ಪುನರ್ಜನ್ಮ ....

ಜನವರಿ -- ೧
ನಾಳೆಯಿಂದ
ನಾ
ಸಿಗರೇಟು ಮುಟ್ಟಲಾರೆ ...
ಇನ್ನು ಕೆಲವರು
ಮಧ್ಯ ಮಾಂಸ...
ಇನ್ನು ಕೆಲವರ
ಮನದಲಿ ಹೊಸ ಆಯೋಜನೆಗಳು ...
ಪೊಳ್ಳು ಶಪಥಗಳು ...
ಒಂದು - ಎರಡು - ಮೂರು ..
ನಾಲ್ಕನೇ ದಿನಕ್ಕೆ ..
ಹೊಸವರುಷವೇ
ಕಳೆದು ಹೋಗುವುದು ...
ಜೊತೆಗೆ
ತಾ
ಮಾಡಿದ ಶಪಥಗಳೂ ...
ಶುನಕದ ಬಾಲ ...
ನಳಿಕೆಯೊಳಿಟ್ಟರೆ ....
................. 

No comments: