Thursday, 9 January 2014

ನನ್ನ ನಗು- ನೋವ ಮರೆಯಲು ನಾ ತೊಡುವ ಮುಖವಾಡ ...

ನನ್ನ ನಗು 
ಮನದೊಳಗಿನ 
ನೋವ ಮರೆಯಲು 
ನಾ ತೊಡುವ 
ಮುಖವಾಡ ... 

ನನ್ನ ಮುಖವಾಡ ನೋಡಿ
ನೀ ನಗುವೆ
ನೋವ ಕಾರಣ
ನೀನೆಂದು
ನಿನಗರಿವಿದ್ದರೂ ..

ನನ್ನದೊಂದು
ಕಿರು ಪ್ರಾರ್ಥನೆ ...

ಮುಖವಾಡವಿಲ್ಲದ
ನಗಲೆನಗೊಂದು
ಕಾಲ ಬಂದರೆ....
ನನ್ನ ನಗುವ ಕಂಡು
ಇನ್ನೊಂದು
ಹೃದಯವು
ನೋಯದಿರಲಿ ... !!!

No comments: