Thursday, 9 January 2014

ಸ್ನೇಹದ ಪಿಪಾಸೆಯ ...

ಸ್ನೇಹದ ಪಿಪಾಸೆಯ 
ಅರುಹುತಲಿರಲು 
ಪೆಕ್ಕಳ ಮಾತಿನಲಿ 
ಅಂದು 
ನೀ ನನಗೆಸೆದ 
ಪಂಚೇಷು
ನನ್ನದೆಯನಿನ್ನೂ
ತಿವಿಯುತಿದೆ ...
ಅದಿನ್ನೆಷ್ಟು
ದಿನವಿದೆಯೂ
ಕೊರೆಯುತಲಿರಲು ....
ನಾನರಿಯೆ
ಪಲುಬಲಿರುವ
ದಿನವೆನಿತೂ ... !!!

(ಪಿಪಾಸೆ=ದಾಹ , ಪಕ್ಕಳ =ಗರ್ವ
ಪಂಚೇಷು = ಗುರಿಯಿಟ್ಟ ಬಾಣ
ಪಲುಬು =ದುಃಖಿಸು )

1 comment:

Badarinath Palavalli said...

ಪದಗಳ ಅರ್ಥವನ್ನೂ ಕೊಟ್ಟು ಒಳ್ಳೆಯ ಕೆಲಸ ಮಾಡಿದಿರಿ. ಉತ್ತಮ ಕವನ.