Thursday, 9 January 2014

ಆತನೊಬ್ಬ ಸಂತ ...

ಆತನೊಬ್ಬ 
ಸಂತ ... 
ಸೋರುವ ಗುಡಿಸಲಲಿ 
ಮಡದಿ ಮಕ್ಕಳನು 
ಬಿಟ್ಟು ಎಲ್ಲೋ ಹೋಗಿದ್ದ 
ಕಾಣದ ದೇವರ ಹುಡುಕುತ ...

ಗುಡಿಸಲ ಪಕ್ಕ ಮದ್ಯದಂಗಡಿ ..
ತುತ್ತಿಗೂ ಗತಿಯಿಲ್ಲದ
ಸಂತನ ಅನಾಥ
ಕುಟುಂಬಕ್ಕೆ
ಹಬ್ಬ - ಜಾತ್ರೆ- ಹೊಸ ವರುಷ-
ನೀಡುತ್ತಿತ್ತು
ಹರುಷ ....

ಕುಡಿದು ಬಿಸಾಕಿದ
ಖಾಲಿ ಬಾಟಲಿಗೆ
ಮಡದಿ ಮಕ್ಕಳು
ದಿನ ಬೆಳಗಾಗುವ ವರೆಗೆ
ಹುಡುಕಾಟ ...

ರಾತ್ರಿಯ ಶೋಕಿಗೆ
ಖಾಲಿಯಾದ ಬಾಟಲಿ
ಪಕ್ಕದ ಗುಡಿಸಲಿಲಿ
ಹಸಿದ ಉದರಗಳಿಗೆ
ಕರುಣಿಸುತಿತ್ತು
ಯಾರಿಗೂ ಅರಿಯದೆ
ಅನ್ನ ದಾನ .... !!!

No comments: