Saturday, 25 January 2014

ಅಮ್ಮಾ ...

ಅಮ್ಮಾ ... 
ನಿನ್ನ ಗೋರಿಯ ಬಳಿ 
ಅಳುತ ಕುಳಿತಿದ್ದೆ .. 
ಸರ್ವಸ್ವವನು 
ಕಳೆದು ಕೊಂಡವನ 
ಮನೋಸ್ಥಿತಿ ...

ಕಣ್ತೆರೆದೊಮ್ಮೆ
ನೋಡಲು ಗೋರಿಯ
ಮೇಲೊಂದು
ಬೀಜದ ಮೊಳಕೆ ...

ನೋವಿನಲೊ ನಾನರಿಯೆ
ನಾನದಕೆ
ಹೆಸರಿಟ್ಟೆ ...
"ವಿರಹದ ಕವನ ... "

ಅದ ಕಿತ್ತು ತಂದು
ನಾ ನೆಟ್ಟೆ
ನನ್ನೀ ಹೃದಯದಲಿ ...

ಅನುದಿನವೂ
ಆ ಸಸಿಗೆ
ನಿನ್ನ ನೆನಪಿನ
ನೀರೆರೆಯುತಿರುವೆ ... !!!

No comments: