Thursday, 9 January 2014

ಹದಿಹರೆಯದ ನೆತ್ತರು ಕುದಿವ ಸಮಯದಲಿ ...



ಹದಿಹರೆಯದ
ನೆತ್ತರು ಕುದಿವ
ಸಮಯದಲಿ
ಗೆಳತಿಯ
ತೆಕ್ಕೆಯಲಿರುವಾಗ 
ಅಪ್ಪ- ಅಮ್ಮನ
ಮಾತು - ಸಲಹೆ
ಸಪ್ಪೆ ..
ಅನಿಸಿರಬಹುದು ...

ತಾನಪ್ಪನಾದಾಗ
ತಾ ಮಾಡಿದ
ತಪ್ಪನರಿತು ನೊಂದರೂ
ತಿದ್ದಲಾಗದು ...
ಮನಸು ಹಗುರವಾಗದು ....

ತನಗರಿವಿಲ್ಲದಿದ್ದರೂ
ಗಮನಿಸುತಿರಬಹುದು ..
ಆಪ್ಪ-ಅಮ್ಮ
ದೂರದ
ಹಿತ್ತಿಲ ಗೋರಿಯಲೆಲ್ಲೋ
ತೆಪ್ಪಗೆ
ಮಲಗಿ.. !!!

No comments: