Thursday, 9 January 2014

ಅಮ್ಮಾ ... ನಾ ನಿನ್ನ ನೋಡಿದೆ ನಿನ್ನೆಯ ಕನಸಿನಲ್ಲಿ ....

ಅಮ್ಮಾ ... 
ನಾ ನಿನ್ನ ನೋಡಿದೆ 
ನಿನ್ನೆಯ ಕನಸಿನಲ್ಲಿ ... 
ಜನಜಂಗುಳಿ .. 
ಜಾತ್ರೆಯಿರಬೇಕು ... 
ನನ್ನೆದುರ ಸಾಲಲ್ಲಿ
ನಿಂತು ಯಾರಲ್ಲೋ
ಏನೇನೂ ಹೇಳುವಂತಹ
ದೃಶ್ಯ ....
ಹಿಂದಿನಿಂದ ನಾ ಬಂದು
ಅಮ್ಮಾ ... ಅಮ್ಮಾ
ಎಂದು ಕೂಗಿ
ಕರೆದಿದ್ದೆ ...
ನೀ ಕೇಳಿಸಲಿಲ್ಲ ...
ನೀ ಮುಂದೆ -ಮುಂದೆ
ವೇಗವಾಗಿ ನಡೆಯುತಿರಲು
ನಾ ಹಿಂದಿನಿಂದ ....
ನಿನ್ನ ಹೆಜ್ಜೆಯನು ಹಿಂಬಾಲಿಸಿ ..
ಕೊನೆಗೆ ಎಲ್ಲವೂ
ಅಗೋಚರ ..
ಅಸ್ಪಷ್ಟ ....
ಮಾತಿಲ್ಲ ..

ಅಮ್ಮಾ ...
ಇಂದು ದಿನವಿಡೀ
ನಿನ್ನ ನೆನಪಿಸಿ
ಮೌನದಲ್ಲಿದ್ದೆ ..... !!!

(ಇದು ನಿನ್ನೆ ರಾತ್ರಿ ನಾ ಕಂಡ ಕನಸಿನ ವಿವರಣೆ ... ಕಲ್ಪನೆಯಲ್ಲ )

No comments: