Thursday, 9 January 2014

ಮೋಕೆಯ ಮುತ್ತಿನಹಾರದಲಿ ...

ಮೋಕೆಯ ಮುತ್ತಿನಹಾರದಲಿ 
ಪೋಣಿಸಿದ 
ಸವಿನೆನಪುಗಳ ಮಣಿಗಳು 
ಉದುರಿ ಹೋಗಿಹುದು .. 
ತಡಕಿದರೂ ಸಿಗುತ್ತಿಲ್ಲ ..

ಮನವ ತಣಿಸಿ
ಹೃದಯವ ಬೆಳಗಲು
ದೀಪವಿಲ್ಲ ..
ನೆನಪುಗಳು ಕೊಡುವುದು
ಬರಿ ಬಿಸಿಯ ತಾಪ ..

ನೆನಪಿನ ತೂಣಿಯಲಿ ತುಂಬಿದ್ದ
ಬಾಣಗಳು ತನ್ನ ಬೆನ್ನಿಗೆ
ಜೊತೆಗೆ
ತನ್ನೆದೆಗೆ ಚುಚ್ಹುತಿದೆ
ವಿರಹದ ನೋವುಗಳಾಗಿ ...

(ತೂಣಿ = ಬತ್ತಳಿಕೆ )

No comments: