Thursday, 9 January 2014

ನನ್ನ ಬರಹಗಳಲಿ ...

ನನ್ನ ಬರಹಗಳಲಿ 
ರಾಜಕೀಯವಿಲ್ಲ ... 
ಜಾತಿ-ಮತ ನಿಂದನೆಯಿಲ್ಲ 
ಒಳಾರ್ಥವಿಲ್ಲ .. 
ದೈವನಿಂದನೆಯಿಲ್ಲ .. 
ಇನ್ನೊಬ್ಬನ ಮನಸ
ನೊಯಿಸುವ ಅಕ್ಷರಗಳಿಲ್ಲ
ಅದಕೇ ...
ಜನರು ನನ್ನ
ಬರಹವ
ಮೆಚ್ಚುವುದಿಲ್ಲ ... 

ಇರುವುದು ...
ಪ್ರೀತಿ
ಸ್ನೇಹ ..
ವಿರಹ ...
ಸಮಾನತೆ
ಜಗದ ನಿಯಮಗಳು
ಮತ್ತು
ನನ್ನ ನೋವುಗಳು ...
ಅದಕೇ ...
ನನ್ನ ಬರಹವ
ಇಷ್ಟಪಡುವವನು
ಒಬ್ಬನೇ ಒಬ್ಬ ..
...
ಅವನೇ
ನನ್ನೊಳಗಿನ ..
ನಾನು ... 

No comments: