Thursday, 9 January 2014

ನನ್ನಮ್ಮ ..

ನನ್ನಮ್ಮ 
ಉಸಿರಾಡದೆ ಮಲಗಿರುವ 
ಹೊತ್ತಿನಲ್ಲಿ 
ಪಕ್ಕದಲಿ 
ಭಕ್ತಿಯಲಿ ದೈವ ನಾಮ 
ಜಪಿಸುತಿದ್ದ
ಜನಗಳನು ಕಂಡಾಗ ...
ಏನೋ
ದುಃಖ ಮಿಶ್ರಿತ ಭಯ
ಜೊತೆಗೆ ಧ್ವೇಶ....

ಬಿಗಿಯಾಗಿ ಅಪ್ಪುತಿದ್ದ
ಅಮ್ಮನ ನೆನಪಿನೊಂದಿಗೆ
ಸಡಿಳವಾಗುತಿದ್ದುದು
ಜೀವನೋತ್ಸಾಹವಲ್ಲ ..
ಸಾವಿನ ಭಯವೂ ಅಲ್ಲ ..

ತಿಂಗಳಿಂದ ಪ್ರಾಣ ಉಳಿಸಲು
ಕಾಡಿ-ಕೊರಗಿ ಪ್ರಾರ್ಥಿಸಿದರೂ
ಪ್ರಾರ್ಥನೆಗೆ ಬೆಲೆಕೊಡದವ .....
ಜಗದೀಶ್ವರನೆಂದು ಹೊಗಳಿ
ಅಟ್ಟಕೇರಿಸುತಿದ್ದೆವಲ್ಲವೇ ...
ಅವನ ಮೇಲಿನ ಇಟ್ಟಿದ್ದ
'ನಂಬಿಕೆ ... .. '

No comments: