Thursday, 9 January 2014

ಅಲ್ಲೊಂದು ಮಾಂಗಲ್ಯ ಸದನ ...

ಅಲ್ಲೊಂದು 
ಮಾಂಗಲ್ಯ ಸದನ ... 
ವಾದ್ಯ ... 
ಗಟ್ಟಿ ಮೇಳ ..
ಬಾಡೂಟ.. 
ಸಂಗೀತ ಕಚೇರಿ ..
ನೃತ್ಯ -ನಲಿವು ...

ಸಂತಸ ಪಡಲು
ಸಂತಸವ ಹುಡುಕಲು
ಹಲವು ನೆಪಗಳು ...

ಉದರ ತುಂಬುವ
ತವಕ -ಸಂತಸದೆದುರು
ಇನ್ನೆಲ್ಲ ಸಂತಸವೂ ಶೂನ್ಯ ...

ಆದರೆ ಅಲ್ಲೊಬ್ಬಳು
ಮುದಿ ಪಾರ್ವಿತಿಯ
ಹಾಜರಿ ...
ವಿಸ್ಮಯ ಗೊಳಿಸಿತ್ತು ...

ಪಕ್ಕದ ಮನೆಯ
ಪ್ರೀತಿಗೆ ಓ ಗೊಟ್ಟು
ಬಂದ
ಸಂಪ್ರದಾಯಸ್ತೆ ..

ಬಯಸಿದ್ದು ..
ಬಂದಿದ್ದು ..
ಸಂಗೀತ ಕೇಳಲಲ್ಲ ...
ನೃತ್ಯ ಮಾಡ ಲಲ್ಲ ...
ಬಾಡೂಟ ಮಾಡಲಲ್ಲ ...

ನೆರೆ ಮನೆಯ
ಹುಡುಗಿಗೊಂದಿಷ್ಟು
ಅಕ್ಷತೆ ಹಾಕಿ
ಶುಭ ಕೋರಲು .. !!!

( ಪಾರ್ವಿತಿ = ಬ್ರಾಹ್ಮಣ ಸ್ತ್ರೀ )

No comments: